ಮೈಸೂರು: ನಾಡಹಬ್ಬ ದಸರಾ ಜಂಬೂ ಸವಾರಿಯ ನೇರ ಪ್ರಸಾರವನ್ನು ವೀಕ್ಷಿಸಲು ಚಂದನ ವಾಹಿನಿಯು ನಗರದಲ್ಲಿ 22 ಕಡೆ ಎಲ್.ಸಿ.ಡಿ ಪರದೆಗಳನ್ನು ಅಳವಡಿಸಿದೆ.
ಕೆ.ಆರ್.ವೃತ್ತದ ಬಳಿ 4 ಪರದೆಗಳಿದ್ದು, ಸಯ್ಯಾಜಿ ರಾವ್ ರಸ್ತೆ ಮಾರ್ಗವಾಗಿ ಬನ್ನಿಮಂಟಪದವರೆಗೆ ಒಟ್ಟು 22 ಪರದೆಗಳನ್ನು ಅಳವಡಿಸಲಾಗಿದೆ.
ಅರಮನೆಯಿಂದ ಚಂದನವಾಹಿನಿಯು ನೇರ ಪ್ರಸಾರ ಮಾಡಲಿದ್ದು, ಈ ಪರದೆಗಳಲ್ಲಿಸಾರ್ವಜನಿಕರುಜಂಬೂ ಸವಾರಿಯ ರಸಕ್ಷಣಗಳನ್ನು ವೀಕ್ಷಿಸಬಹುದಾಗಿದೆ.
ಹಲವಡೆ ವೀಕ್ಷಕರ ವಿವರಣೆ
ಮೈಸೂರು: ಜಂಬೂ ಸವಾರಿ ಸಾಗುತ್ತಿರುವ ಮಾರ್ಗದಲ್ಲಿ 6 ಕಡೆ ವೀಕ್ಷಕವಿವರಣೆ ನೀಡಲಾಗುತ್ತಿದೆ. ಜಂಬೂ ಸವಾರಿಯ ಮೆರವಣಿಗೆಯಲ್ಲಿ ಭಾಗಿಯಾಗಿರುವ ಕಲಾತಂಡ ಮತ್ತು ಸ್ತಬ್ಧಚಿತ್ರಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಕೆ.ಆರ್.ವೃತ್ತ, ಆರ್ಯವೇದ ಆಸ್ಪತ್ರೆ ವೃತ್ತ, ಆರ್ ಎಂಸಿ, ಹೈವೇ ವೃತ್ತ ಹಾಗೂ ಬನ್ನಿಮಂಟಪದ ಬಳಿ ಸಾರ್ವಜನಿಕ ಶಿಕ್ಷಣ ಇಲಾಖೆಯ 12 ಮಂದಿ ನೌಕರರು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.