ADVERTISEMENT

ಪ್ರೀತಿಗೆ ತಲೆಬಾಗುವೆ: ಎಸ್.ಎಲ್‌.ಭೈರಪ್ಪ

ದಸರಾ: ಭೈರಪ್ಪ, ಪ್ರಮೋದಾದೇವಿ ಒಡೆಯರ್‌ಗೆ ಅಧಿಕೃತ ಆಹ್ವಾನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 20:44 IST
Last Updated 19 ಸೆಪ್ಟೆಂಬರ್ 2019, 20:44 IST
ದಸರಾ ಉದ್ಘಾಟನೆಗೆ ಸಾಹಿತಿ ಎಸ್‌.ಎಲ್.ಭೈರಪ್ಪ ಅವರನ್ನು ಸಚಿವ ವಿ.ಸೋಮಣ್ಣ ಆಹ್ವಾನಿಸಿದರು. ಸಂಸದ ಪ್ರತಾಪ ಸಿಂಹ, ಲೇಖಕ ಪ್ರಧಾನ ಗುರುದತ್ತ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಇದ್ದಾರೆ
ದಸರಾ ಉದ್ಘಾಟನೆಗೆ ಸಾಹಿತಿ ಎಸ್‌.ಎಲ್.ಭೈರಪ್ಪ ಅವರನ್ನು ಸಚಿವ ವಿ.ಸೋಮಣ್ಣ ಆಹ್ವಾನಿಸಿದರು. ಸಂಸದ ಪ್ರತಾಪ ಸಿಂಹ, ಲೇಖಕ ಪ್ರಧಾನ ಗುರುದತ್ತ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಇದ್ದಾರೆ   

ಮೈಸೂರು: ‘ದಸರಾ ಉದ್ಘಾಟಿಸಲು, ಸರ್ಕಾರ ಪ್ರೀತಿಯಿಂದ ಆಹ್ವಾನಿಸಿದೆ. ಆ ಪ್ರೀತಿಗೆ ಕೃತಜ್ಞನಾಗಿದ್ದೇನೆ’ ಎಂದು ಸಾಹಿತಿ ಎಸ್‌.ಎಲ್‌. ಭೈರ‍ಪ್ಪ ಹೇಳಿದರು.

ಸಚಿವ ವಿ.ಸೋಮಣ್ಣ ಅವರು ಭೈರಪ್ಪ ಅವರನ್ನು ಅಧಿಕೃತವಾಗಿ ದಸರಾ ಉದ್ಘಾಟನೆಗೆ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭೈರಪ್ಪ ಅವರು, ‘ಸಾಹಿತಿಗಳನ್ನು ನಿಜವಾಗಿ ಪ್ರೀತಿಸುವ ವಿದ್ಯಾವಂತರು ಈ ಸರ್ಕಾರದಲ್ಲಿ ಇದ್ದಾರೆ. ಅದು ಬಹಳ ಮುಖ್ಯ. ಸಾಹಿತಿಗಳಿಗೆ ಏನೋ ಕೊಟ್ಟು ತಾವು ಹೇಳಿದ್ದನ್ನು ಕೇಳಿಸಿಕೊಳ್ಳಬೇಕು ಎಂಬ ಅಹಂಕಾರ ರಾಜ್ಯ, ಕೇಂದ್ರ ಸರ್ಕಾರಕ್ಕಿಲ್ಲ’ ಎಂದು ಹೇಳಿದರು.

ADVERTISEMENT

‘ನಾನು ಇಂಗ್ಲೆಂಡ್‌ಗೆ ತೆರಳಬೇಕಿತ್ತು. ದಸರೆಗಾಗಿ, ಭೇಟಿ ಮುಂದೂಡಿದ್ದೇನೆ’ ಎಂದು ತಿಳಿಸಿದರು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರನ್ನು ನಂತರ ಉತ್ಸವಕ್ಕೆ ಆಹ್ವಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.