ADVERTISEMENT

ಮೈಸೂರು: ಬೃಹತ್ ಗಾತ್ರದ ಬಸವನ ವಿಗ್ರಹಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 20:15 IST
Last Updated 14 ಜುಲೈ 2019, 20:15 IST
ಮೈಸೂರು ತಾಲ್ಲೂಕಿನ ಅರಸಿನಕೆರೆ ಗ್ರಾಮದಲ್ಲಿ ಹೂತು ಹೋಗಿದ್ದ ಬೃಹತ್ ನಂದಿ ವಿಗ್ರಹದ ಸುತ್ತಲಿನ ಮಣ್ಣನ್ನು ತೆರವುಗೊಳಿಸಿದರು
ಮೈಸೂರು ತಾಲ್ಲೂಕಿನ ಅರಸಿನಕೆರೆ ಗ್ರಾಮದಲ್ಲಿ ಹೂತು ಹೋಗಿದ್ದ ಬೃಹತ್ ನಂದಿ ವಿಗ್ರಹದ ಸುತ್ತಲಿನ ಮಣ್ಣನ್ನು ತೆರವುಗೊಳಿಸಿದರು   

ಮೈಸೂರು: ತಾಲ್ಲೂಕಿನ ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ಬೃಹತ್ ಗಾತ್ರದ ಎರಡು ನಂದಿ ವಿಗ್ರಹಗಳು ಪತ್ತೆಯಾಗಿದ್ದು, ಆಕರ್ಷಣೆಯ ಕೇಂದ್ರ ಬಿಂದುವಾಗಿವೆ.

ಇವುಗಳಲ್ಲಿ ಒಂದು ನಂದಿ ವಿಗ್ರಹವು ಸುಮಾರು 15 ಅಡಿ ಉದ್ದ ಹಾಗೂ 12 ಅಡಿ ಎತ್ತರ ಇದೆ. ಇದಕ್ಕೆ ಎದುರಾಗಿ ಗಾತ್ರದಲ್ಲಿ ಚಿಕ್ಕದಾದ ಮತ್ತೊಂದು ನಂದಿ ವಿಗ್ರಹ ದೊರೆತಿದೆ.

ಇಲ್ಲಿಯವರೆಗೆ ಈ ನಂದಿ ವಿಗ್ರಹದ ಕೊಂಬುಗಳಷ್ಟೇ ಕಾಣುತ್ತಿದ್ದವು. ಇವುಗಳನ್ನು ಜನರು ‘ಜೋಡಿ ಬಸವಣ್ಣ’ ಎಂದು ಕರೆದು ಪೂಜೆ ಸಲ್ಲಿಸುತ್ತಿದ್ದರು. ಈಗ ಗ್ರಾಮಸ್ಥರೇ ಹಣ ಸಂಗ್ರಹಿಸಿ ಜೆಸಿಬಿ ಯಂತ್ರಗಳ ಮೂಲಕ ಮಣ್ಣನ್ನು ತೆಗೆಸಿದಾಗ ಬೃಹತ್ ನಂದಿ ವಿಗ್ರಹಗಳು ಗೋಚರಿಸಿವೆ.

ADVERTISEMENT

ಹಿಂದೊಮ್ಮೆ ಚಾಮರಾಜೇಂದ್ರ ಒಡೆಯರ್ ಇಲ್ಲಿಗೆ ಭೇಟಿ ನೀಡಿ ಹೂತು ಹೋಗಿದ್ದ ನಂದಿ ವಿಗ್ರಹಗಳನ್ನು ಹೊರತೆಗೆಯಲು ಪ್ರಯತ್ನಿಸಿದ್ದರು. ಆಗ ಇಲ್ಲಿ ನೀರು ತುಂಬಿಕೊಂಡಿತ್ತು. ಹೀಗಾಗಿ, ಪ್ರಯತ್ನ ಫಲ ನೀಡಿರಲಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.