ಬೆಂಗಳೂರು: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮೈಸೂರು ಭಾಗಕ್ಕೆ ಸಿಕ್ಕ ಯೋಜನೆಗಳ ಕಿರು ಪರಿಚಯ ಇದು.
*ಹಾಸನ ಹಾಲು ಒಕ್ಕೂಟದಲ್ಲಿ ಶೇ 15 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ ಸ್ಥಾಪನೆ. ಮೂಲಭೂತ ಸೌಕರ್ಯಕ್ಕಾಗಿ 50 ಕೋಟಿ ಮೀಸಲು
*ಮೈಸೂರಿನಲ್ಲಿ ವೀರ್ಯ ನಳಿಕೆ ವಿತರಣಾ ಕೇಂದ್ರ ಸ್ಥಾಪನೆ
*ತುಮಕೂರಿನಲ್ಲಿ ಕ್ರೀಡೆ ಮತ್ತು ಅಂಗ ಸಾಧನೆಗೆ ಸಂಬಂಧಿಸಿದ ಖಾಸಗಿ ಸಹಭಾಗಿತ್ವದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ. ಅದಕ್ಕೆ ಮೂರು ಕೋಟಿ ಮೀಸಲು
*ಸರ್ಕಾರಿ ಹಾಗೂ ಖಾಸಗಿ ಭದ್ರತಾ ಸಿಬ್ಬಂದಿಗೆ ತರಬೇತಿ ಶಿವಮೊಗ್ಗದಲ್ಲಿ ತಾಯಿನಾಡು ಭದ್ರತಾ ವಿಶ್ವ ವಿದ್ಯಾಲಯ ಸ್ಥಾಪನೆಗೆ 3 ಕೋಟಿ
*ರಾಮನಗರ ಜಿಲ್ಲೆ ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ
*ಮಂಡ್ಯ ಮೆಡಿಕಲ್ ಆಸ್ಪತ್ರೆಯನ್ನು 800 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆ
*ರಾಮನಗರದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 40 ಕೋಟಿ ರೂಪಾಯಿ ಮೀಸಲು
*ಮೈಸೂರಿನಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ತೃತಿಯ ಹಂತದ ಆರೋಗ್ಯ ಸೇವೆಗಳನ್ನು ಒದಗಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
*ಚಾಮರಾಜನಗರ, ಹಾಸನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 450 ಹಾಸಿಗೆ ಸಾಮರ್ಥ್ಯ, 200 ಕೋಟಿ ವೆಚ್ಚ
*ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್‍ಇಡಿ ಉತ್ಪಾದಕ ಫ್ಯಾಕ್ಟರಿ ಸ್ಥಾಪನೆ.
*ಚಿಕ್ಕಬಳ್ಳಾಫುರ ಜಿಲ್ಲೆಯಲ್ಲಿ ಮೊಬೈಲ್ ಫೋನ್ ಬಿಡಿ ಭಾಗಗಳ ಘಟಕ ಸ್ಥಾಫನೆ
*ತುಮಕೂರಿನಲ್ಲಿ ಸ್ಪೊರ್ಟ್ಸ್ ಆಂಡ್ ಫಿಟ್‍ನೆಸ್ ವಸ್ತುಗಳ ತಯಾರಿಕ ಘಟಕ.
*ಮೈಸೂರಿನಲ್ಲಿ ಐಸಿಬಿ ಚಿಪ್ ತಯಾರಿಕ ಘಟಕ
*ಹಾಸನದಲ್ಲಿ ಟೈಲ್ಸ್ ಫ್ಯಾಕ್ಟರಿ
*ಭರಚುಕ್ಕಿ ಮತ್ತು ಗಗನಚುಕ್ಕಿ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಮೀಸಲು
*ರಾಮನಗರದಲ್ಲಿ ಆರ್ಟ್ ಆಂಡ್ ಕ್ರಾಪ್ಟ್ ವಿಲೇಜ್
* ಖಾಸಗಿ ಸಹಭಾಗಿತ್ವದಲ್ಲಿ ಕಣ್ವ ಜಲಾಶಯದಲ್ಲಿ ಮಕ್ಕಳ ತಾಣ ನಿರ್ಮಾಣ
*ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಅನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಇದಕ್ಕೆ 5 ಕೋಟಿ ರೂಪಾಯಿ ಮೀಸಲು.
*ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿದೆ.
*ಮಂಡ್ಯ ಜಿಲ್ಲೆ ಲೋಕಪಾವನ ನದಿಯಿಂದ ದುದ್ದ ಕೆರೆಗೆ ನೀರು ತುಂಬಿಸಲು 30 ಕೊಟಿ ರೂಪಾಯಿ ಅನುದಾನ
*ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ( ಖಾಸಗಿ ಸಹಭಾಗಿತ್ವದಲ್ಲಿ)
* ರಾಮಗನರದಲ್ಲಿ ಚಿತ್ರನಗರಿ ಸ್ಥಾಪನೆಗೆ 40 ಕೋಟಿ ಅನುದಾನ
*ಚಿಕ್ಕಬಳ್ಳಾಪುರ ಗೌರಿಬಿದನೂರಿನಲ್ಲಿ ಎಚ್. ನರಸಿಂಹಯ್ಯ ನೆನಪಿನ ವಿಜ್ಞಾನ ಕೇಂದ್ರ ಸ್ಥಾಪನೆ
*ಹಾಸನ ನಗರ ವರ್ತುಲ ರಸ್ತೆ ನಿರ್ಮಾಣಕ್ಕೆ 30 ಕೋಟಿ ಮೀಸಲು.
*ಹಾಸನ ಮತ್ತು ಚನ್ನಪಟ್ಟಣ ಕೆರೆಗಳ ಸಮಗ್ರ ಅಭಿವೃದ್ಧಿಗೆ 136 ಕೋಟಿ
*ಮಂಡ್ಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ 50 ಕೋಟಿ.
*ಮೈಸೂರಿನ ಉಂಡವಾಡಿ ಬಳಿ ಕಾವೇರಿ ಹೆಚ್ಚುವರಿ ನೀರಿನ ಘಟಕ, ನೀರು ಪೂರೈಕೆಗೆ 50 ಕೋಟಿ ರೂಪಾಯಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.