ADVERTISEMENT

ರಾಜಮಂಶಸ್ಥರಾದ ಪ್ರಮೋದಾದೇವಿಗೆ ಮಾತೃವಿಯೋಗ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 13:42 IST
Last Updated 19 ಅಕ್ಟೋಬರ್ 2018, 13:42 IST
ಪುಟ್ಟ ಚಿನ್ನಮ್ಮಣ್ಣಿ
ಪುಟ್ಟ ಚಿನ್ನಮ್ಮಣ್ಣಿ   

ಮೈಸೂರು: ರಾಜಮಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರ ತಾಯಿ ಪುಟ್ಟಚಿನ್ನಮ್ಮಣ್ಣಿ (98)ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.

ವಯೋ ಸಹಜ ಕಾಯಿಲೆಗಳಿಂದಪುಟ್ಟ ಚಿನ್ನಮ್ಮಣ್ಣಿ ಅವರು ಬಳಲುತ್ತಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅರಮನೆಯ ಮೂಲಗಳು ತಿಳಿಸಿವೆ.

ವಿಶ್ವವಿಖ್ಯಾತ ದಸರಾ ಸಮಯದಲ್ಲೇ ಅವರು ನಿಧನರಾಗಿರುವುದರಿಂದ ರಾಜಮನೆತನದ ಖಾಸಗಿ ದಸರಾದ ಸಾಂಪ್ರದಾಯಿಕ ಆಚರಣೆಗಳಿಗೆಸೂತಕವಾಗಲಿದೆ ಎಂದು ಅರಮನೆ ಪುರೋಹಿತರುಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ರಾಜ್ಯ ಸರಕಾರ ನಡೆಸುತ್ತಿರುವ ದಸರಾ ಹಾಗೂ ಜಂಬೂ ಸವಾರಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.