ADVERTISEMENT

ನಾಗರಹೊಳೆ: ಹೊರ ರಾಜ್ಯದ ವಾಹನಗಳಿಗೆ ಪ್ರವೇಶ ಶುಲ್ಕ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 22:00 IST
Last Updated 25 ಫೆಬ್ರುವರಿ 2023, 22:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರರಾಜ್ಯ ಗಡಿಗಳಲ್ಲಿ ಹೊರರಾಜ್ಯದಿಂದ ಬರುವ ವಾಹನಗಳಿಗೆ ಅರಣ್ಯ ಇಲಾಖೆ ಶುಲ್ಕ ವಿಧಿಸಲು ಆರಂಭಿಸಿದೆ.

ಲಘು ಮೋಟಾರು ವಾಹನಗಳಿಗೆ ₹ 20, ಭಾರಿ ವಾಹನಗಳಿಗೆ ₹ 50 ಪ್ರವೇಶ ದರ ನಿಗದಿಪಡಿಸಲಾಗಿದೆ. ಈ ಹಣವನ್ನು ಅರಣ್ಯದಲ್ಲಿ ಹಾದು ಹೋಗುವ ರಸ್ತೆಯ ಸ್ವಚ್ಛತೆಗೆ ಬಳಸಲು ನಿರ್ಧರಿಸಲಾಗಿದೆ.

‘ಕುಟ್ಟ ನಾಣಚ್ಚಿ, ಆನೆಚೌಕೂರು, ವೀರನಹೊಸಹಳ್ಳಿ, ಮಾಲ್ದಾರೆ, ಕಾರ್ಮಾಡು ಹಾಗೂ ಇತರ ಗೇಟ್‌ಗಳಲ್ಲಿ ಶುಲ್ಕ ವಸೂಲಾತಿ ಆರಂಭವಾಗಿದೆ’ ಎಂದು ನಾಗರಹೊಳೆ ವನ್ಯಜೀವಿ ವಿಭಾಗದ ಎಸಿಎಫ್‌ ಗೋಪಾಲ್‌ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.