ನಂಜನಗೂಡು: ನಗರದ ಇತಿಹಾಸ ಪ್ರಸಿದ್ಧ ಶ್ರೀಕಂಠೇಶ್ವರ ದೇವಾಲಯದ 21 ಹುಂಡಿಗಳಿಗೆ ಭಕ್ತರು ಹಾಕಿದ್ದ ಕಾಣಿಕೆಯನ್ನು ಶುಕ್ರವಾರ ಸಿಬ್ಬಂದಿ ಎಣಿಸಿದ್ದು, ದಾಖಲೆ ಪ್ರಮಾಣದ ₹ 2.15 ಕೋಟಿ ಸಂಗ್ರಹವಾಗಿದೆ.
108 ಗ್ರಾಂ ಚಿನ್ನ, 5.75 ಕೆ.ಜಿ ಬೆಳ್ಳಿ ಹಾಗೂ 29 ವಿದೇಶಿ ಕರೆನ್ಸಿಗಳು ಇದ್ದವು. ₹ 1 ಸಾವಿರ ಮುಖಬೆಲೆಯ 10 ಹಾಗೂ 500 ಮುಖ ಬೆಲೆಯ 64 ನಿಷೇಧಿತ ನೋಟುಗಳನ್ನೂ ಭಕ್ತರು ಹುಂಡಿಗೆ ಹಾಕಿದ್ದರು.
ಬ್ಯಾಂಕ್ ಅಫ್ ಬರೋಡ ಸಿಬ್ಬಂದಿ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು, ದೇವಾಲಯದ ಸಿಬ್ಬಂದಿ ಸೇರಿ200 ಕ್ಕೂ ಹೆಚ್ಚು ಮಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.