ADVERTISEMENT

ಮೂರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 22:00 IST
Last Updated 20 ಫೆಬ್ರುವರಿ 2023, 22:00 IST
ಶ್ರೀ ನಾರಾಯಣ ಗುರು
ಶ್ರೀ ನಾರಾಯಣ ಗುರು   

ಬೆಂಗಳೂರು: ಶ್ರೀ ನಾರಾಯಣ ಗುರು, ಗಾಣಿಗ ಮತ್ತು ಹಡಪದ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ಈಡಿಗ ಸಮುದಾಯದ 26 ಉಪ ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಗಾಣಿಗ, ತೇಲಿ, ಗಾಂಡ್ಲ,ವನಿಯನ್‌ ಹಾಗೂ ಜ್ಯೋತಿನಗರ ವೈಶ್ಯ ಸಮುದಾಯ
ಗಳ ಅಭಿವೃದ್ಧಿಗೆ ಗಾಣಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಹಡಪದ ಸಮುದಾಯದ ಅಭಿವೃದ್ಧಿಗೆ ಹಡಪದ ನಿಗಮ ಸ್ಥಾಪಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

2022–23ನೇ ಆರ್ಥಿಕ ವರ್ಷದ ಬಜೆಟ್‌ನಲ್ಲಿ ನಾರಾಯಣ ಗುರು ಅಭಿವೃದ್ಧಿಕೋಶ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಈಡಿಗರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನೇ ಸ್ಥಾಪಿಸುವಂತೆ ಸಮುದಾಯದ ಚುನಾಯಿತ ಪ್ರತಿನಿಧಿಗಳು, ಮಠಾ
ಧೀಶರು ಹಾಗೂ ಸಂಘ– ಸಂಸ್ಥೆಗಳ ಪ್ರಮುಖರು ಒತ್ತಾಯಿಸಿದ್ದರು. ಶುಕ್ರವಾರ ಮಂಡಿಸಿದ್ದ ಬಜೆಟ್‌ನಲ್ಲೂ ನಿಗಮಗಳ ಸ್ಥಾಪನೆ ಕುರಿತು ಘೋಷಿಸಿರಲಿಲ್ಲ. ವಿವಿಧ ಸಮುದಾಯಗಳ ಮುಖಂಡರು ನಿಗಮಗಳ ಸ್ಥಾಪನೆಗೆ ಒತ್ತಡ ಹೇರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.