ಗೋಣಿಕೊಪ್ಪಲು: ಉರಗ ಮತ್ತು ಪರಿಸರ ತಜ್ಞ ಸತೀಶ್ ಅವರಿಗೆ ರಾಷ್ಟ್ರಮಟ್ಟದ ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿದೆ.
ವನ್ಯಜೀವಿ ಸಪ್ತಾಹ-2020ರ ಅಂಗ ವಾಗಿ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ವನ್ಯಜೀವಿ ಛಾಯಾ ಚಿತ್ರ ಸ್ಪರ್ಧೆಯಲ್ಲಿ ಅವರು, ಕಬಿನಿ ಅರಣ್ಯ ದಲ್ಲಿ ಸೆರೆಹಿಡಿಯಲಾದ ಎರಡು ಹುಲಿ ಗಳ ಚಿತ್ರಕ್ಕೆ ಪ್ರಥಮ ಸ್ಥಾನ ದೊರೆತಿದೆ.
ಬೆಂಗಳೂರಿನ ಅರವಿಂದ್ ಬಿ.ಕಾರ್ತಿಕ್, ನಾಗರಹೊಳೆಯಲ್ಲಿ ಸೆರೆ ಹಿಡಿದ ವನ್ಯಜೀವಿ ಛಾಯಾಚಿತ್ರಕ್ಕೆ ಮತ್ತು ಮಂಗಳೂರಿನ ಕಿಶನ್ ಕುಮಾರ್ ಬಿಜೈ, ಕಬಿನಿಯಲ್ಲಿ ಸೆರೆಹಿಡಿದ ಛಾಯಾ ಚಿತ್ರಕ್ಕೆಎರಡನೇ ಬಹುಮಾನ ದೊರೆ ತಿದೆ. ಮಣಿಪಾಲದ ಹ್ಯಾರಿಸ್ ಮೊಹಮ್ಮದ್, ಆಗುಂಬೆಯಲ್ಲಿ ಸೆರೆ ಹಿಡಿದ ಮತ್ತು ಬೆಂಗಳೂರಿನ ಬಿ.ಆರ್.ಹರೀಶ್ ಗೌಡ,ಕಬಿನಿಯಲ್ಲಿ ತೆಗೆದ ವನ್ಯ ಜೀವಿ ಚಿತ್ರಕ್ಕೆ ಮೂರನೇ ಬಹುಮಾನ ದೊರೆತಿದೆ. ಉಡುಪಿಯವರಾದ ಸತೀಶ್ ಇದೀಗ ಮೈಸೂರಿನ ಇನ್ಫೊಸಿಸ್ ಕೇಂದ್ರದಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.