ಬೆಂಗಳೂರು: ಮಾಪ್‌ಅಪ್ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾದ ವಿದ್ಯಾರ್ಥಿಗಳು ಅ. 22ರ ಒಳಗೆ ಕಾಲೇಜುಗಳಿಗೆ ಪ್ರವೇಶ ಪಡೆಯಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.
ಈ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿರುವ 703 ವಿದ್ಯಾರ್ಥಿಗಳಲ್ಲಿ ಮೂಲ ದಾಖಲೆ ಸಲ್ಲಿಸಿದ 223 ವಿದ್ಯಾರ್ಥಿಗಳಿಗೆ ದಾಖಲೆ ಸಲ್ಲಿಕೆಗೆ ಅ.21ರ ಬೆಳಿಗ್ಗೆ 11.30ರಿಂದ 1.30ರವೆಗೆ ಅವಕಾಶ ನೀಡಲಾಗಿದೆ. ಶುಲ್ಕ ಪಾವತಿಸದವರು 21ರೊಳಗೆ ಕಟ್ಟಬೇಕು.
ಸಿಇಟಿ: ಅ.21 ಕೊನೆಯ ದಿನ:
ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳ ಸೀಟು ಹಂಚಿಕೆ ಆದವರು ಅ.21ರ ಮಧ್ಯಾಹ್ನ 2ರ ಒಳಗೆ ಶುಲ್ಕ ಪಾವತಿಸಿ, ಅದೇ ದಿನ ಸಂಜೆ 5.30ರೊಳಗೆ ಕಾಲೇಜುಗಳಿಗೆ ಪ್ರವೇಶ ಪಡೆಯಬೇಕು ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.