ADVERTISEMENT

ನೀಟ್‌ ಅಗತ್ಯವಿಲ್ಲ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 16:24 IST
Last Updated 18 ಜೂನ್ 2024, 16:24 IST
<div class="paragraphs"><p> ಡಿಕೆಶಿ</p></div>

ಡಿಕೆಶಿ

   

ಬೆಂಗಳೂರು: ‘ನೀಟ್‌ ನಡೆಸುವ ಬಗ್ಗೆ ನಮಗೂ ಆಕ್ಷೇಪವಿದೆ. ತಮಿಳುನಾಡಿನ ಮಾದರಿಯಲ್ಲಿ ನೀಟ್ ವಿರೋಧಿಸುವ ಆಲೋಚನೆ ಇದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

‘ರಾಜ್ಯದಲ್ಲಿ ನಮ್ಮವರೇ ಕಟ್ಟಿ ಬೆಳೆಸಿದ ವೈದ್ಯಕೀಯ ಕಾಲೇಜುಗಳಲ್ಲಿ ನಮ್ಮವರಿಗೇ ಸೀಟು ಸಿಗುತ್ತಿಲ್ಲ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಪರೀಕ್ಷೆಯಲ್ಲಿ ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿಗಳ ಜತೆ ನಾವಿದ್ದೇವೆ. ಕೇವಲ 1,563 ಅಭ್ಯರ್ಥಿಗಳಿಗಲ್ಲದೇ ಎಲ್ಲ ಅಭ್ಯರ್ಥಿಗಳಿಗೂ ಮರುಪರೀಕ್ಷೆ ಬರೆಯಲು ಅವಕಾಶ ನೀಡಬೇಕು’ ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.