ನವದೆಹಲಿ (ಪಿಟಿಐ) : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸಿದ್ದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ರಾಜಸ್ಥಾನದ ನಳಿನ್ ಖಾಂಡೇವಾಲ ಮೊದಲ ರ್‍ಯಾಂಕ್ ಗಳಿಸಿದ್ದಾರೆ.
ಮೇ 5 ಮತ್ತು 20ರಂದು ನಡೆದಿದ್ದ ನೀಟ್ ಪರೀಕ್ಷೆ ಬರೆದ 14,10,755 ವಿದ್ಯಾರ್ಥಿಗಳ ಪೈಕಿ 7,97,042 (ಶೇ 56.50) ಅರ್ಹತೆ ಗಳಿಸಿದ್ದಾರೆ. ಕಳೆದ ವರ್ಷ ಶೇ 56.27ರಷ್ಟು ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದರು.
ಮೊದಲ ರ್‍ಯಾಂಕ್ ಗಳಿಸಿರುವ ನಳಿನ್ ಖಾಂಡೇವಾಲ 720 ಅಂಕಗಳಿಗೆ701 ಅಂಕ ಗಳಿಸಿದ್ದಾರೆ. ದೆಹಲಿಯ ಭವಿಕ್ ಬನ್ಸಾಲ್ ಮತ್ತು ಉತ್ತರ ಪ್ರದೇಶದ ಅಕ್ಷಾಂತ್ ಕೌಶಿಕ್ ತಲಾ 700ಅಂಕಗಳನ್ನು ಪಡೆದು ಕ್ರಮವಾಗಿ ಎರಡು,ಮೂರನೇ ರ್‍ಯಾಂಕ್ ಪಡೆದಿದ್ದಾರೆ.
ಪರೀಕ್ಷೆ ಬರೆದ ವಿದ್ಯಾರ್ಥಿನಿಯರ ಪೈಕಿ ಮೊದಲ ಸ್ಥಾನದಲ್ಲಿರುವ ತೆಲಂಗಾಣದ ಜಿ. ಮಾಧುರಿ ರೆಡ್ಡಿ (695)ಅವರು ಅಖಿಲ ಭಾರತ ರ್‍ಯಾಂಕಿಂಗ್ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದಿದ್ದಾರೆ. ಅಂಗವಿಕಲ ವಿದ್ಯಾರ್ಥಿಗಳಲ್ಲಿ ರಾಜಸ್ಥಾನದ ಭೇರಾರಾಮ್ 604 ಅಂಕ ಪಡೆದು ಅಂಗವಿಕಲರ ಅರ್ಹತಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.