ADVERTISEMENT

ನೇಹಾ–ಫಯಾಜ್ ಪ್ರೀತಿಸುತ್ತಿದ್ದರು, ಮಗ ತಪ್ಪು ಮಾಡಿದ್ದಾನೆ ಶಿಕ್ಷೆಯಾಗಲಿ:ಮುಮ್ತಾಜ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಏಪ್ರಿಲ್ 2024, 11:32 IST
Last Updated 20 ಏಪ್ರಿಲ್ 2024, 11:32 IST
<div class="paragraphs"><p>ಮುಮ್ತಾಜ್</p></div>

ಮುಮ್ತಾಜ್

   

ಬೆಂಗಳೂರು: ನೇಹಾ –ಫಯಾಜ್‌ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ, ನೇಹಾಳನ್ನು ಹತ್ಯೆ ಮಾಡುವ ಮೂಲಕ ನನ್ನ ಮಗ ತಪ್ಪು ಮಾಡಿದ್ದಾನೆ. ಆತನಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ ಎಂದು ಫಯಾಜ್‌ ಅವರ ತಾಯಿ ಮುಮ್ತಾಜ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಮಗ ಮಾಡಿದ ತಪ್ಪಿಗೆ ನಾನು ರಾಜ್ಯದ ಜನತೆಗೆ ಕ್ಷಮೆಯಾಚಿಸುತ್ತೇನೆ. ನೇಹಾ ಕೂಡ ನನ್ನ ಮಗಳು ಇದ್ದಂತೆ. ಅವರ ತಂದೆ– ತಾಯಿಗೆ ಎಷ್ಟು ದುಃಖ ಆಗಿದಿಯೋ ಅಷ್ಟೇ ದುಃಖ ನಮಗೂ ಆಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಫಯಾಜ್‌, ದೇಹದಾಢ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಮೂಲಕ ಯೂನಿವರ್ಸಿಟಿ ಬ್ಲೂ ಆಗಿ ಹೊರಹೊಮ್ಮಿದ್ದ. ಆದಾದ ಬಳಿಕ ನೇಹಾಳೇ ಖುದ್ದಾಗಿ ಫಯಾಜ್‌ ಬಳಿ ಮೊಬೈಲ್ ನಂಬರ್ ತೆಗೆದುಕೊಂಡಿದ್ದಳು. ಮೊದಲಿಗೆ ಆಕೆಯೇ ನನ್ನ ಮಗನಿಗೆ ಪ್ರಪೋಸ್‌ ಮಾಡಿದ್ದಳು. ಒಂದು ವರ್ಷದ ಹಿಂದೆ ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಎಂದು ಫಯಾಜ್‌ ನನ್ನ ಬಳಿ ಹೇಳಿಕೊಂಡಿದ್ದ ಎಂದು ಮುಮ್ತಾಜ್ ಹೇಳಿದ್ದಾರೆ.

ಫಯಾಜ್‌, ಎಸ್‌ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಚೆನ್ನಾಗಿ ಓದುತ್ತಿದ್ದ, ಶೇ 90ರಷ್ಟು ಅಂಕಗಳನ್ನು ಪಡೆದಿದ್ದ. ಹಾಗಾಗಿ ಆತನನ್ನು ಐಎಎಸ್‌ ಮಾಡಿಸಬೇಕು ಎಂದು ಕನಸುಕಂಡಿದ್ದೆ. ಆದರೆ, ಪ್ರೀತಿಯಲ್ಲಿ ಬಿದ್ದ ಬಳಿಕ ಆತ ಓದಿನಲ್ಲಿ ಹಿಂದುಳಿದಿದ್ದ ಎಂದು ಮುಮ್ತಾಜ್ ಕಣ್ಣೀರು ಹಾಕಿದ್ದಾರೆ.

ನೇಹಾ ಒಳ್ಳೆಯ ಹುಡುಗಿ. ಆಕೆಯನ್ನು ಕೊಲೆ ಮಾಡಿ ತಪ್ಪು ಮಾಡಿರುವ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ ಎಂದು ಮುಮ್ತಾಜ್ ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜು ಆವರಣದಲ್ಲಿ ಗುರುವಾರ ಫಯಾಜ್‌, ನೇಹಾಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.