ಓದುಗರ ಇಷ್ಟಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಪ್ರಜಾವಾಣಿಯ ಜಾಲತಾಣವು ಈಗ ಆಧುನಿಕತೆಗೆ ತಕ್ಕಂತೆ ಹೊಸ ವಿನ್ಯಾಸದಲ್ಲಿ ನಿಮ್ಮ ಮುಂದಿದೆ. ಪ್ರತಿ ದಿನವೂ ಬದಲಾಗುತ್ತಿರುವ ತಂತ್ರಜ್ಞಾನದ ವೇಗಕ್ಕೆ, ಓಘಕ್ಕೆ ಸ್ಪಂದಿಸಿ, ಹೊಸತನ್ನು ನಮ್ಮ ಓದುಗರಿಗೆ ನೀಡಬೇಕೆಂಬ ತುಡಿತ ಮತ್ತು ಓದುಗರನ್ನೂ ಸಮಕಾಲೀನ ತಂತ್ರಜ್ಞಾನ ಬೆಳವಣಿಗೆಗಳಿಗೆ ಸಂವಾದಿಯಾಗಿ ಕರೆದೊಯ್ಯಬೇಕೆಂಬ ಅಭಿಲಾಷೆ - ಇವುಗಳ ಮೇಳೈಸುವಿಕೆಯ ಫಲವೇ Prajavani.net ನ ಪುಟಗಳಲ್ಲಿನ ನವೀನ ರೂಪ.
ಏನೆಲ್ಲ ಬದಲಾವಣೆಗಳಾಗಿವೆ?
ಮೊದಲನೆಯದಾಗಿ, ಒಂದು ಸುದ್ದಿ ಅಥವಾ ಲೇಖನದ ಪುಟ ತೆರೆದರೆ, ಕೆಳಗೆ ಸ್ಕ್ರಾಲ್ ಮಾಡುತ್ತಾ ಹೋದಂತೆ, ನಿಮಗಿಷ್ಟವಾಗಬಹುದಾದ ಇನ್ನೆರಡು ಸುದ್ದಿ ಅಥವಾ ಲೇಖನವನ್ನೂ ನೋಡಬಹುದಾಗಿದೆ. ಮೊದಲ ಸುದ್ದಿಯ ಕೊನೆಯಲ್ಲಿ ಆ ವಿಭಾಗದ ಇನ್ನೂ ಐದು ಇತ್ತೀಚಿನ ಸುದ್ದಿ/ಲೇಖನಗಳು ಬ್ಲಾಕ್ ರೂಪದಲ್ಲಿ ಕಾಣಿಸುತ್ತವೆ. ಸುದ್ದಿಗೆ ಪ್ರತಿಕ್ರಿಯೆ ನೀಡಲು ಇಮೋಜಿಗಳನ್ನೂ ನೀವು ನೋಡಬಹುದಾಗಿದೆ.
ಅದೇ ರೀತಿ, ಪುಟದ ಯಾವುದೇ ಭಾಗದಿಂದ ನಿಮಗಿಷ್ಟವಾಗುವ ಈ ಸುದ್ದಿ ಅಥವಾ ಲೇಖನವನ್ನು ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಸ್ನೇಹಿತರಿಗೆ ಶೇರ್ ಮಾಡಬೇಕೆಂದಾದರೆ, ಅದಕ್ಕಾಗಿಯೇ ಫೇಸ್‌ಬುಕ್, ವಾಟ್ಸ್ಆ್ಯಪ್, ಟ್ವಿಟರ್ ಬಟನ್‌ಗಳು ಎಡಭಾಗದಲ್ಲಿ ಗೋಚರಿಸುತ್ತವೆ. ಈಗಿರುವ ಅಕ್ಷರ ಗಾತ್ರ ಚಿಕ್ಕದಾಗಿದೆ ಎಂದಾದರೆ, ಅದನ್ನು ದೊಡ್ಡದಾಗಿಸಿ ನೋಡಲು ಇರುವ ಸೌಲಭ್ಯವನ್ನು ಮುಂದುವರಿಸಲಾಗಿದೆ.
ಸುದ್ದಿಯ ಕೆಳಭಾಗದಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗಳ ಲಿಂಕ್‌ಗಳೊಂದಿಗೆ, ಪ್ರಜಾವಾಣಿ ಸಂಪಾದಕೀಯ ತಂಡವು ನಿಮಗಾಗಿ ಆಯ್ದ ಕೆಲವು ಸುದ್ದಿ/ಲೇಖನಗಳ ಲಿಂಕ್‌ಗಳನ್ನು ನೀಡಿದೆ. ಪುಟದ ಕೆಳಭಾಗದಲ್ಲಿ ಪ್ರಮುಖ ವಿಭಾಗಗಳ ಕೊಂಡಿಗಳು ವರ್ಗೀಕೃತ ರೂಪದಲ್ಲಿದ್ದು, ತಮ್ಮಿಷ್ಟದ ವಿಭಾಗದ ಸುದ್ದಿ/ಲೇಖನಗಳಿಗೆ ಓದುಗರು ಸುಲಭವಾಗಿ ನ್ಯಾವಿಗೇಟ್ ಮಾಡಬಹುದಾಗಿದೆ.
ಅದೇ ರೀತಿ, ಪ್ರತೀ ಪುಟದ ಬಲ ಭಾಗದಲ್ಲಿ ಸಾಕಷ್ಟು ಬದಲಾವಣೆಗಳಿವೆ. ವಿಡಿಯೊ ಹಾಗೂ ಫೋಟೊ ಗ್ಯಾಲರಿಗಳು ಗಮನ ಸೆಳೆಯಲಿವೆ. ಇಷ್ಟೇ ಅಲ್ಲದೆ, ಈ ದಿನ ಪ್ರಜಾವಾಣಿ ಓದುಗರು ಯಾವ ಸುದ್ದಿ ಅಥವಾ ಲೇಖನವನ್ನು ಅತೀ ಹೆಚ್ಚು ಓದಿದ್ದಾರೆ/ಪ್ರತಿಕ್ರಿಯಿಸಿದ್ದಾರೆ ಅಂತ ತಿಳಿಯಬೇಕಿದ್ದರೆ, 'ಟಾಪ್ ಟ್ರೆಂಡಿಂಗ್' ವಿಭಾಗವನ್ನು ನೋಡಿದರೆ ಸಾಕು. ಪಕ್ಕದಲ್ಲೇ, ಇತ್ತೀಚೆಗೆ ಪ್ರಕಟವಾದ ಸುದ್ದಿಗಳೂ ಗೋಚರಿಸುತ್ತವೆ. ನಿಮ್ಮ ದಿನ ಭವಿಷ್ಯವನ್ನು ಕೂಡ ಯಾವುದೇ ಪುಟದಿಂದ ನೋಡುವಂತೆ ಪುಟದ ಬಲಭಾಗವನ್ನು ರೂಪಿಸಲಾಗಿದೆ.
ತಾಜಾ ಸುದ್ದಿಗಳು ಜತೆಗೆ ಹೆಚ್ಚು ಆಸಕ್ತಿದಾಯಕ ವಿಷಯಗಳು ಒಂದೇ ಕಡೆ ಸಿಗುವಂತಾಗಲು, ಓದುಗರ ಸಲಹೆಗಳ ಆಧಾರದಲ್ಲಿ ನಮ್ಮ ವೆಬ್ ತಾಂತ್ರಿಕ ತಂಡವು ಈ ಬದಲಾವಣೆಗಳನ್ನು ಮಾಡಿದೆ. ಯಾವ ಅಂಶ ಇಷ್ಟವಾಯಿತು, ಯಾವುದು ಇಷ್ಟವಾಗಲಿಲ್ಲ ಎಂದು ಪ್ರತಿಕ್ರಿಯೆ ನೀಡುವುದಕ್ಕೂ ನಿಮಗೆ ಪ್ರತೀ ಪುಟದಲ್ಲಿ ಪ್ರತ್ಯೇಕ ವಿಂಡೋದ ಮೂಲಕ ಅವಕಾಶ ನೀಡಲಾಗಿದೆ.
ಈ ಹೊಸ ಬದಲಾವಣೆಯು ನಿಮಗಿಷ್ಟವಾಗುವುದೆಂಬ ವಿಶ್ವಾಸದೊಂದಿಗೆ, ಮುಂದಿನ ದಿನಗಳಲ್ಲಿ ನಿಮ್ಮದೇ ಸಲಹೆ ಸೂಚನೆಗಳ ಆಧಾರದಲ್ಲಿ ಮತ್ತಷ್ಟು ಬದಲಾವಣೆಗಳು ನಿಮ್ಮ ಓದಿನ ಹಸಿವನ್ನು ಇಂಗಿಸಲಿವೆ ಎಂಬ ಭರವಸೆ ನಿಮ್ಮ ಪ್ರೀತಿಯ ಪ್ರಜಾವಾಣಿಯ ತಂಡದ್ದು. ತಾಜಾ ಸುದ್ದಿ, ಓದಿನ ಹಸಿವನ್ನು ನೀಗಿಸುವ ಮಾಹಿತಿ, ಮನರಂಜನೆಗಾಗಿ Prajavani.net ನೋಡಿ. ಬದಲಾವಣೆಗಳು ನಿಮಗಿಷ್ಟವಾಗಬಹುದೆಂಬ ಭರವಸೆ ನಮ್ಮದು.
-ಸಂಪಾದಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.