ADVERTISEMENT

ಶರಾವತಿ ಭೂಗರ್ಭದಲ್ಲಿ ವಿದ್ಯುತ್ ಸ್ಥಾವರ: ಡಿಪಿಆರ್‌ ಸಿದ್ಧಪಡಿಸಲು ಸಿಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 19:37 IST
Last Updated 26 ಸೆಪ್ಟೆಂಬರ್ 2019, 19:37 IST
ಮಹಾತ್ಮ ಗಾಂಧಿ ಪವರ್‌ ಸ್ಟೇಷನ್‌ ಮತ್ತು ಶರಾವತಿ ನದಿ
ಮಹಾತ್ಮ ಗಾಂಧಿ ಪವರ್‌ ಸ್ಟೇಷನ್‌ ಮತ್ತು ಶರಾವತಿ ನದಿ   

ಬೆಂಗಳೂರು: ಶರಾವತಿ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರು ತರುವ ವಿವಾದಿತ ಯೋಜನೆಯ ಬೆನ್ನಲ್ಲೇ, ಇದೀಗ ಅದೇ ಕಣಿವೆಯ ಭೂಗರ್ಭದಲ್ಲಿ ವಿದ್ಯುತ್‌ ಸ್ಥಾವರ ಸ್ಥಾಪಿಸುವ ಯೋಜನೆಗೂ ಸರ್ಕಾರ ಮುಂದಾಗಿದೆ.

ಪಂಪ್ಡ್‌ ಸ್ಟೋರೇಜ್‌ ಮೂಲಕ ಶರಾವತಿ ನೀರು ಬಳಸಿಕೊಂಡು ಭೂಗರ್ಭದಲ್ಲಿ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ಯೋಜನೆಗೆ ಪೂರಕವಾಗಿ ಸಮಗ್ರ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿದೆ.

2,000 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಉದ್ದೇಶದಿಂದ, ತಲಕಳಲೆ ಮತ್ತು ಗೇರುಸೊಪ್ಪದಲ್ಲಿ ತಲಾ 250 ಮೆಗಾವಾಟ್‌ ಉತ್ಪಾದನಾ ಸಾಮರ್ಥ್ಯದ ಎಂಟು ಘಟಕಗಳ ಸ್ಥಾವರಗಳನ್ನು ಸ್ಥಾ‍ಪಿಸುವ ಈ ಯೋಜನೆಗೆ 378 ಎಕರೆ ಭೂಮಿ ಅಗತ್ಯವಿದ್ದು, ಇದರಲ್ಲಿ 370 ಅರಣ್ಯ ಭೂಮಿ ಸೇರಿದೆ.

15 ಬೋರ್‌ವೆಲ್‌ಗಳನ್ನು ಕೊರೆಯಲು ಉದ್ದೇಶಿಸಲಾಗಿದ್ದು, ಇದರಲ್ಲಿ 12 ಬೋರ್‌ವೆಲ್‌ಗಳು ಅರಣ್ಯದಲ್ಲೇ ಇರಲಿವೆ.

2017ರಲ್ಲಿ ರೂಪಿಸಿದ್ದ ಯೋಜನೆಗೆ ₹4,862 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಲಾಗಿತ್ತು.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.