ಕೋವಿಡ್ ತಂದಿತ್ತ ಸಂಕಷ್ಟದ ಹೊರೆಯನ್ನು ತುಸು ಇಳಿಸಿಕೊಂಡು ಹೊಸ ಭರವಸೆಗಳೊಂದಿಗೆ ಹೊಸ ವರ್ಷ ಬರಮಾಡಿಕೊಳ್ಳುವ ಹೊತ್ತು ಇದು. ಈ ಸುಸಮಯವು ಸಕಾರಾತ್ಮಕ ಆಲೋಚನೆಗಳಿಗೆ ಸ್ಫೂರ್ತಿಯಾಗಲಿ ಎಂಬ ಸಂಕಲ್ಪದಲ್ಲಿ ‘ಪ್ರಜಾವಾಣಿ’ ಹೊಸ ಹೆಜ್ಜೆ ಇಟ್ಟಿದೆ. ಕೋವಿಡ್ ಕಷ್ಟ ಕಾಲದಲ್ಲಿ ತಮ್ಮ ಅನವರತ ಶ್ರಮ–ಕೊಡುಗೆಗಳ ಮೂಲಕ ಜನರಿಗೆ ನೆರವಾದ ಸಾಧಕರನ್ನು ಪರಿಚಯಿಸುವ ಕೆಲಸ ಮಾಡಿದ್ದೇವೆ. ಹೊಸ ವರ್ಷದ ಹಾದಿಯಲ್ಲಿ ಇನ್ನಷ್ಟು ಮಂದಿಗೆ ಪ್ರೇರಣೆ ನೀಡಲಿ ಎಂಬುದು ನಮ್ಮ ಹಂಬಲ. ಕನ್ನಡ ನಾಡಿನ ಈ ಕೊರೊನಾ ಸೇನಾನಿಗಳು ಪ್ರಚಾರಕ್ಕಾಗಿ ತೊಡಗಿಸಿಕೊಂಡವರಲ್ಲ; ಕರ್ತವ್ಯ–ಕಾಳಜಿಯ ಕರೆಗೆ ಎದೆಗೊಟ್ಟವರು. ಇವರಂತೆಯೇ ಪ್ರಚಾರ ಬಯಸದೇ ಕೆಲಸ ಮಾಡುತ್ತಿರುವ ಅನೇಕರೂ ಇದ್ದಾರೆ; ಇಂತಹವರ ಸಂತತಿ ನೂರ್ಮಡಿಯಾಗಲಿ; ಇವರ ಸನ್ನಡತೆ, ಅರ್ಪಣಾ ಮನೋಭಾವ ಹೊಸ ವರ್ಷದ ಹೊಸ್ತಿಲಲ್ಲಿ ಎಲ್ಲರಿಗೂ ಮಾದರಿಯಾಗಿ, ಹೊಸ ಕನಸು ತುಂಬಲಿ ಎಂಬ ಆಶಯದೊಂದಿಗೆ. . . – ಸಂ.
ಪ್ರತಿ ಜಿಲ್ಲೆಯಕೊರೊನಾ ಸೇನಾನಿಗಳ ಯಶೋಗಾಥೆಯನ್ನು ಇಲ್ಲಿ ನೀಡಲಾಗಿದೆ. ಓದಲು ಈ ಕೆಳಗೆ ನೀಡಲಾಗಿರುವ ಲಿಂಕ್ ಕ್ಲಿಕ್ ಮಾಡಿ.
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.