ಬೆಂಗಳೂರು: ಅಸ್ಥಿತ್ವದಲ್ಲಿರುವ ರಾತ್ರಿ ಆಶ್ರಯ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ಸಲ್ಲಿಸಿದ್ದ ಹೇಳಿಕೆ ಅವಲೋಕಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿತು.
ರಾಜ್ಯದಲ್ಲಿ ಒಟ್ಟಾರೆ 166 ಆಶ್ರಯ ಕೇಂದ್ರಗಳ ಅಗತ್ಯವಿದ್ದು, ಸದ್ಯ 46 ಆಶ್ರಯ ಕೇಂದ್ರಗಳಿವೆ. ಬೆಂಗಳೂರಿನಲ್ಲಿ 84 ಆಶ್ರಯ ಕೇಂದ್ರಗಳ ಅಗತ್ಯವಿದೆ. ಮೈಸೂರಿನಲ್ಲಿ 9 ತಾಣಗಳ ಅಗತ್ಯವಿದ್ದು, ಒಂದೇ ಕೇಂದ್ರವಿದೆ. ಹುಬ್ಬಳ್ಳಿ–ಧಾರವಾಡದಲ್ಲೂ ಒಂಬತ್ತು ತಾಣಗಳು ಅಗತ್ಯವಿದ್ದು, ಎರಡು ಕೇಂದ್ರಗಳಷ್ಟೇ ಇವೆ ಎಂದು ಸರ್ಕಾರ ವಿವರಿಸಿತು.
ಬೆಂಗಳೂರಿನಲ್ಲಿ 42 ಮತ್ತು ಇತರ ನಗರಗಳಲ್ಲೂ ಅಗತ್ಯಕ್ಕೆ ತಕ್ಕಂತೆ ಆಶ್ರಯ ಕೇಂದ್ರಗಳನ್ನು ಮುಂದಿನ ಮೂರು ತಿಂಗಳಲ್ಲಿ ಆರಂಭಿಸಬೇಕು ಎಂದು ಪೀಠ ನಿರ್ದೇಶನ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.