ಖ್ಯಾತ ಕವಿ ಹಾಗೂ ಬರಹಗಾರ ಕೆ.ಎಸ್. ನಿಸಾರ್ ಅಹಮದ್ ಅವರು ಭಾನುವಾರ ನಿಧನರಾಗಿದ್ದು, ಅವರ ರಚನೆಯ ಕಾಡುವ ಭಾವಗೀತೆಗಳು ಈಗ ನಮ್ಮೊಂದಿಗುಳಿದಿವೆ.
2007 ರಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪಂಪ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾದ ಅವರ ರಚನೆಯ ಹಲವು ಭಾವಗೀತೆಗಳು ಇಂದಿಗೂ ಜನಮಾನಸದಲ್ಲಿ ಉತ್ತುಂಗದ ಸ್ಥಾನದಲ್ಲಿವೆ.
ಕಥೆಗಾರ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಬಗೆಗಿನ ತಮ್ಮದೇ ರಚನೆಯನ್ನುನಿಸಾರ್ ಅಹಮದ್ ‘ಪ್ರಜಾವಾಣಿ’ ಓದುಗರಿಗಾಗಿ ಓದಿದ್ದರು.
ನಿಸಾರ್ ರಚನೆಯ ಜನಪ್ರಿಯ ಭಾವಗೀತೆಗಳಲ್ಲಿ ಆಯ್ದ 10 ಗೀತೆಗಳ ಸಂಗ್ರಹ ಇಲ್ಲಿದೆ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.