ADVERTISEMENT

ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಮುಂದಾದ ನಿತ್ಯಾನಂದ!

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 14:41 IST
Last Updated 17 ಆಗಸ್ಟ್ 2020, 14:41 IST
ನಿತ್ಯಾನಂದ
ನಿತ್ಯಾನಂದ   

ರಾಮನಗರ: ಕೈಲಾಸ ಹೆಸರಿನ ರಾಷ್ಟ್ರ ನಿರ್ಮಾಣ ಮಾಡುವುದಾಗಿ ಹೇಳಿ ಸುದ್ದಿಯಾಗಿದ್ದ ನಿತ್ಯಾನಂದ ಸ್ವಾಮೀಜಿ, ಇನ್ನು ನಾಲ್ಕೇ ದಿನದಲ್ಲಿ ತನ್ನ ಈ ಹೊಸ ದೇಶಕ್ಕಾಗಿ ರಿಸರ್ವ್‌ ಬ್ಯಾಂಕ್‌ ಸಹ ಸ್ಥಾಪನೆ ಮಾಡಲಿದ್ದಾರಂತೆ!

ಈ ಕುರಿತು 2ನಿಮಿಷ 43 ಸೆಕೆಂಡುಗಳ ವಿಡಿಯೊ ಒಂದನ್ನು ಅವರು ಅಂತರ್ಜಾಲದಲ್ಲಿ ಹರಿಬಿಟ್ಟಿದ್ದಾರೆ. ಗಣೇಶ ಚತುರ್ಥಿಯ ಶುಭ ದಿನದಂದೇ ತನ್ನೀ ಹೊಸ ಬ್ಯಾಂಕಿನ ರೂಪುರೇಷೆಗಳನ್ನು ಭಕ್ತರ ಮುಂದೆ ಇಡುವುದಾಗಿ ಘೋಷಣೆ ಮಾಡಿದ್ದಾರೆ. ‘ರಿಸರ್ವ್‌ ಬ್ಯಾಂಕ್‌ ಆಫ್‌ ಕೈಲಾಸ’ ಎಂಬ ಹೆಸರಿನ ಬ್ಯಾಂಕ್‌ ಇದಾ‌ಗಲಿದ್ದು, ವ್ಯಾಟಿಕನ್ ಬ್ಯಾಂಕ್‌ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ. ದೇಶದ ಆರ್ಥಿಕತೆ ನಿರ್ವಹಣೆಗೆ ಅಡಿಪಾಯ ಹಾಕಲಿದೆ. ಅದಕ್ಕಾಗಿ ಸುಮಾರು 300 ಪುಟದಷ್ಟು ದಾಖಲೆಗಳನ್ನು ಸಿದ್ಧಪಡಿಸಲಾಗಿದೆ’ ಎಂದು ನಿತ್ಯಾನಂದ ಹೇಳಿಕೊಂಡಿದ್ದಾರೆ.

‘ದೇಶಕ್ಕೊಂದು ಆರ್ಥಿಕ ವ್ಯವಸ್ಥೆ ರೂಪಿಸುವುದು ಹಾಗೂ ದೇಣಿಗೆ ನಿರ್ವಹಣೆಯ ಉದ್ದೇಶಗಳಿಗಾಗಿ ಈ ಬ್ಯಾಂಕ್‌ ಸ್ಥಾಪನೆ ಆಗುತ್ತಿದೆ’ ಎಂದೂ ಹೇಳಿದ್ದಾರೆ.

ADVERTISEMENT

ಈ ಬೆನ್ನಲ್ಲೇ ‘ಕೈಲಾಸ’ ಕರೆನ್ಸಿ ಹೆಸರಿನಲ್ಲಿ ಹಲವು ಚಿತ್ರಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ಅದು ನಿತ್ಯಾನಂದ ರೂಪಿಸಿದ್ದೇ ಎನ್ನುವುದು ಖಾತ್ರಿಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.