ADVERTISEMENT

ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ: ಕಾಫಿಡೇ ಸಿದ್ದಾರ್ಥ ಮನೆಯಲ್ಲಿ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 11:15 IST
Last Updated 30 ಜುಲೈ 2019, 11:15 IST
ಮಂಗಳೂರಿನಲ್ಲಿ ಹುಡುಕಾಟ
ಮಂಗಳೂರಿನಲ್ಲಿ ಹುಡುಕಾಟ   

ಬೆಂಗಳೂರು: ‘ಸಾಹೇಬರು ನಿನ್ನೆ (ಸೋಮವಾರ) ಮನೆಯಿಂದ ಹೊರಟಾಗ ಖುಷಿಯಾಗಿಯೇ ಇದ್ದರು. ಅವರು ಖಂಡಿತ ಬದುಕಿದ್ದಾರೆ. ಅವರಿಗೆ ಏನೂ ಆಗಿಲ್ಲ...’

– ಸಿದ್ದಾರ್ಥ ಅವರ ಮನೆಯಲ್ಲಿ ಕೆಲಸ ಮಾಡುವವರು ಒಡೆಯನ ಬರುವಿಕೆಯ ನಿರೀಕ್ಷೆಯಲ್ಲಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಆಡುತ್ತಿರುವ ಮಾತುಗಳಿವು.

‘ಸಾಹೇಬರು ಯಾವತ್ತೂ ತಲೆಬಿಸಿ ಮಾಡಿಕೊಂಡಿದ್ದನ್ನು ನಾನು ಕಂಡಿಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಎಲ್ಲೋ ಬದುಕಿದ್ದಾರೆ. ಸಂತೋಷದಿಂದ ಇದ್ದಾರೆ ಎನಿಸುತ್ತದೆ’ ಎಂದು ಸಿದ್ಧಾರ್ಥ ಅವರ ಮನೆಕೆಲಸದ ಮೂವರು ಮಹಿಳೆಯರು ತಿಳಿಸಿದರು.

ADVERTISEMENT

‘ಅವರು ಹೊರಡುವಾಗ ಅವರ ಮುಖದ ಮೇಲಿನ ನಗು ಮಾಸಿರಲಿಲ್ಲ. ಖುಷಿಯಾಗಿಯೇ ಇದ್ದರು’ ಎಂದುಸಿದ್ದಾರ್ಥ ಅವರ ಮನೆಯ ಭದ್ರತಾ ಸಿಬ್ಬಂದಿ ನಾಗರಾಜ್ ಹೇಳಿದರು.

ವ್ಯಕ್ತಿಯೊಬ್ಬರು ಹಾರಿದ್ದು ನೋಡಿದ್ದೇನೆ

ವ್ಯಕ್ತಿಯೊಬ್ಬರು ಸೇತುವೆಯಿಂದ ನದಿಗೆ ಹಾರಿದ್ದನ್ನು ನೋಡಿದ್ದೇನೆ ಎಂದು ಮಂಗಳೂರಿನ ಮೀನುಗಾರಉಳ್ಳಾಲದ ಸೈಮನ್ ಡಿಸೋಜ ಹೇಳಿದ್ದಾರೆ. ಅವರ ಮಾತುಗಳ ವಿಡಿಯೊ ಇಲ್ಲಿದೆ.

ಮಂಗಳೂರಿಗೆ ನೌಕಾಪಡೆ ಸರ್ಚ್‌ ಬೋಟ್

ಕಾರವಾರ:ಉದ್ಯಮಿ ಸಿದ್ದಾರ್ಥ ಹುಡುಕಾಟ ಕಾರ್ಯಾಚರಣೆಗೆ ಇಲ್ಲಿನ ಸೀಬರ್ಡ್ ನೌಕಾನೆಲೆಯಿಂದ ಎರಡು ಸರ್ಚ್ ಬೋಟ್‌ಗಳನ್ನು 'ಜೆಮಿನಿ'ಯನ್ನು ಮಂಗಳೂರಿಗೆ ಕಳುಹಿಸಲಾಗಿದೆ. ಅವುಗಳಲ್ಲಿ ಎಂಟು ಸಿಬ್ಬಂದಿ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾಧಿಕಾರಿ ಮಾಡಿದ ಮನವಿಯ ಮೇರೆಗೆ ಸೀಬರ್ಡ್ ನೌಕಾನೆಲೆಯಿಂದ ಮುಳುಗುತಜ್ಞರ ತಂಡವನ್ನು ಮಂಗಳೂರಿಗೆ ಕಳುಹಿಸಲಾಗಿದೆ ಎಂದು ನೌಕಾನೆಲೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.