ADVERTISEMENT

ಕಲಪಳ್ಳಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 9:52 IST
Last Updated 10 ಜೂನ್ 2019, 9:52 IST
   

ಬೆಂಗಳೂರು: ಕಾರ್ನಾಡರ ಅಂತ್ಯ ಸಂಸ್ಕಾರವನ್ನು ಅವರ ಅಪೇಕ್ಷೆಯಂತೆಯೇಧಾರ್ಮಿಕ ವಿಧಿ ವಿಧಾನಗಳಿಲ್ಲದೇ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಆಪ್ತ ಮತ್ತು ಚಿತ್ರ ನಿರ್ದೇಶಕ ಕೆ.ಎಂ. ಚೈತನ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಾರ್ನಾಡರ ಪಾರ್ಥಿವ ಶರೀರ ಹೊತ್ತ ವಾಹನ ಇದೀಗ ಚಿತಾಗಾರದತ್ತ ಹೊರಟಿದೆ.

‘ಮನೆಯ ಬಳಿ ಕಾರ್ನಾಡರ ಶರೀರದ ಅಂತಿಮ ದರ್ಶನಕ್ಕೆ ಅವಕಾಶಇರುವುದಿಲ್ಲ. ಅಂತ್ಯಕ್ರಿಯೆಯುಬೈಯಪ್ಪನಹಳ್ಳಿಯ (ಕಲಪಳ್ಳಿ) ವಿದ್ಯುತ್‌ ಚಿತಾಗಾರದಲ್ಲಿನಡೆಯಲಿದ್ದು. ಅಂತಿಮ ದರ್ಶನ ಪಡೆಯಲು ಇಚ್ಛಿಸುವ ಮಿತ್ರರು, ಒಡನಾಡಿಗಳು, ಬಂಧುಗಳು ಮಧ್ಯಾಹ್ನ 2 ಗಂಟೆಗೆಅಲ್ಲಿಗೇ ಬರಬೇಕು’ ಎಂದು ಕೆ.ಎಂ.ಚೈತನ್ಯ ತಿಳಿಸಿದ್ದಾರೆ.

ಧಾರ್ಮಿಕ ವಿಧಿ ವಿಧಾನಗಳಿಲ್ಲದೇ ಅಂತ್ಯ ಸಂಸ್ಕಾರ ನಡೆಯಬೇಕು ಎಂಬುದು ಕಾರ್ನಾಡರ ಅಪೇಕ್ಷೆಯಾಗಿತ್ತು. ವಿದ್ಯುತ್ ಚಿತಾಗಾರದಲ್ಲೇ ಸಂಸ್ಕಾರ ಮಾಡಬೇಕು ಎಂಬುದು ಕುಟುಂಬದ ಇಂಗಿತ ಎನ್ನಲಾಗಿದೆ.

ADVERTISEMENT

ಕಲಪಳ್ಳಿ ಚಿತಾಗಾರಕ್ಕೆ ಮಧ್ಯಾಹ್ನ 2 ಗಂಟೆಗೆ ಆಂಬುಲೆನ್ಸ್‌ನಲ್ಲಿ ಪಾರ್ಥಿವ ಶರೀರ ಕೊಂಡೊಯ್ಯಲಾಗುವುದು.ಲ್ಯಾವೆಲ್ಲೆ ರಸ್ತೆಯಲ್ಲಿರುವ ಪುರವಂಕರ ಅಪಾರ್ಟ್‌ಮೆಂಟ್ ಸಮುಚ್ಚಯದಿಂದಮಧ್ಯಾಹ್ನ 1ಕ್ಕೆ ಶವ ತೆಗೆದುಕೊಂಡು ಹೋಗಲಾಗುತ್ತದೆ. ಪ್ರೇಜರ್ ಟೌನ್ ಮಾರ್ಗವಾಗಿಆಂಬುಲೆನ್ಸ್ ಸಾಗಲಿದೆ.

ಕಲಪಳ್ಳಿ ವಿದ್ಯುತ್ ಚಿತಾಗಾರ

‘ಅವರ ಅಭಿಮಾನಿಗಳು, ಹಿತೈಷಿಗಳು ಚಿತಾಗಾರ ಸಮೀಪಅಂತಿಮ ದರ್ಶನ ಪಡೆಯಬಹುದು. ಯಾವುದೇಹೂಗುಚ್ಛ, ಹೂವಿನ ಹಾರ, ಗಂಧದ ಹಾರ ಕೊಂಡೊಯ್ಯುವಂತಿಲ್ಲ. ಇದು ಕಾರ್ನಾಡರಕೊನೆಯ ಆಸೆ ಆಗಿತ್ತು’ ಎಂದು ಕಾರ್ನಾಡ್ ಪುತ್ರ ನೀಡಿರುವ ಮಾಹಿತಿಯನ್ನು ಡಿಸಿಪಿ ದೇವರಾಜ್ ಮಾಧ್ಯಮಗಳೊಂದಿಗೆ ಹಂಚಿಕೊಂಡರು.

ಅಂತ್ಯ ಸಂಸ್ಕಾರದ ವೇಳೆ ಯಾವುದೇ ಮೆರವಣಿಗೆ, ಸರ್ಕಾರಿ ಗೌರವ ಇರುವುದಿಲ್ಲ. ಮನೆ ಬಳಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿಲ್ಲ. ಕಲ್ಪಹಳ್ಳಿಯ ವಿದ್ಯುತ್ ಚಿತಾಗಾರದಲ್ಲಿ ಬೆಳಿಗ್ಗೆಯಿಂದ ಸಿದ್ಧತೆಗಳು ಆರಂಭವಾಗಿವೆ. ಸಿಬ್ಬಂದಿ ಸ್ವಚ್ಚತಾ ಕೆಲಸದಲ್ಲಿ ನಿರತರಾಗಿದ್ದಾರೆ.

ಮಧ್ಯಾಹ್ನ 3 ಗಂಟೆಯಿಂದ ಸಂಜೆ 4 ಗಂಟೆ ಅವಧಿಯವರೆಗೆ ಗಿರೀಶ್ ಕಾರ್ನಾಡ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರಕ್ಕೆ ಚಿತಾಗಾರವನ್ನು ಕಾಯ್ದಿರಿಸಲಾಗಿದೆ ಎಂದು ಚಿತಾಗಾರದ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.