ADVERTISEMENT

ಪ್ರಜ್ವಲ್ ರೇವಣ್ಣ ಬಗ್ಗೆ ಯಾರೂ ದೂರು ನೀಡಿಲ್ಲ: ರಾಷ್ಟ್ರೀಯ ಮಹಿಳಾ ಆಯೋಗ

ಪಿಟಿಐ
Published 9 ಮೇ 2024, 13:11 IST
Last Updated 9 ಮೇ 2024, 13:11 IST
<div class="paragraphs"><p>ಪ್ರಜ್ವಲ್ ರೇವಣ್ಣ</p></div>

ಪ್ರಜ್ವಲ್ ರೇವಣ್ಣ

   

ನವದೆಹಲಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಯಾವೊಬ್ಬ ಮಹಿಳೆಯೂ ನಮಗೆ ದೂರು ಸಲ್ಲಿಸಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.

ಅಲ್ಲದೆ ನಕಲಿ ದೂರು ನೀಡಲು ಒತ್ತಾಯಿಸಲಾಗಿದೆ ಎಂದು ಆರೋಪಿಸಿ ಓರ್ವ ಮಹಿಳೆ ನಮ್ಮ ಬಳಿಗೆ ಬಂದಿದ್ದಾರೆ ಎಂದು ಆಯೋಗ ಮಾಹಿತಿ ನೀಡಿದೆ.

ADVERTISEMENT

ಸಂತ್ರಸ್ತೆಯರಿಂದ ಎರಡು ಲೈಂಗಿಕ ದೌರ್ಜನ್ಯದ ದೂರು ಹಾಗೂ ಅಪಹರಣದ ಒಂದು ದೂರು ದಾಖಲಾಗಿವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡ ವರದಿಯಲ್ಲಿ (ಎಟಿಆರ್‌) ತಿಳಿಸಿದ್ದಾರೆ. ಆದರೆ ನಮ್ಮ ಬಳಿ ದೂರು ನೀಡಲು ಯಾವುದೇ ಸಂತ್ರಸ್ತೆ ಬಂದಿಲ್ಲ ಎಂದು ಆಯೋಗ ತಿಳಿಸಿದೆ.

‘ಕರ್ನಾಟಕ ಪೊಲೀಸರು ಎಂದು ಹೇಳಿಕೊಂಡು ಸಿವಿಲ್ ಉಡುಗೆಯಲ್ಲಿ ಬಂದಿದ್ದ ಮೂರು ಪೊಲೀಸರು ದೂರು ನೀಡಲು ಬಲವಂತಪಡಿಸಿದ್ದಾರೆ ಎಂದು ಆರೋಪಿಸಿ ಓರ್ವ ಮಹಿಳೆ ನಮ್ಮ ಬಳಿ ಬಂದಿದ್ದಾರೆ ಎಂದು ಆಯೋಗ ಹೇಳಿದೆ.

‘ದೂರು ನೀಡುವಂತೆ ಬಲವಂತ ಮಾಡಿ ವಿವಿಧ ಫೋನ್‌ ನಂಬರ್‌ಗಳಿಂದ ನನಗೆ ಕರೆ ಬರುತ್ತಿದೆ. ಅವರು ತಮಗೆ ಹಾಗೂ ಕುಟುಂಬಕ್ಕೆ ರಕ್ಷಣೆ ಕೋರಿದ್ದಾರೆ’ ಎಂದು ಆಯೋಗ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.