ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶದ ಜೊತೆಗೆ ಮೊಟ್ಟೆ, ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ವಿತರಿಸುವ ಯೋಜನೆ ಜಾರಿಗೊಂಡಿದೆ. ಈ ಹಿಂದೆ 1ರಿಂದ 8ನೆ ತರಗತಿಯ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ಯೋಜನೆ 10ನೆ ತರಗತಿಯವರೆಗೂ ವಿಸ್ತರಿಸಿದೆ. ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸಲು ತೊಗರಿಬೇಳೆ, ಸಂಸ್ಕರಿತ ತಾಳೆಎಣ್ಣೆ ಮತ್ತು ಕಡಲೆಬೇಳೆಗಳು, ವಿವಿಧ ಬಗೆಯ ತರಕಾರಿಗಳನ್ನು ಒಳಗೊಂಡ ಬಿಸಿಯೂಟ ನೀಡುವ ಉದ್ದೇಶ ಈ ಯೋಜನೆಯದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.