ಬೆಂಗಳೂರು: ನ್ಯಾಯಯುತ ದರ ನಿಗದಿಪಡಿಸುವಂತೆ ಹೈಕೋರ್ಟ್ ಸೂಚನೆ ನೀಡಿದ್ದ ಬೆನ್ನಲ್ಲೇ, ಮೊಬೈಲ್ ಆ್ಯಪ್ ಆಧರಿತ ಆಟೊ ರಿಕ್ಷಾ ಪ್ರಯಾಣ ದರವನ್ನು ಓಲಾ ಹಾಗೂ ಉಬರ್ ಕಂಪನಿಗಳು ಇಳಿಕೆ ಮಾಡಿವೆ.
ಸಾರಿಗೆ ಇಲಾಖೆ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಸುತ್ತಿದ್ದ ಕಂಪನಿಗಳು, ಸಾರ್ವಜನಿಕರಿಂದ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡುತ್ತಿದ್ದ ಬಗ್ಗೆ ದೂರುಗಳು ಬಂದಿದ್ದವು. ಎರಡೂ ಕಂಪನಿಗಳ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿವೆ. ಅರ್ಜಿ ವಿಚಾರಣೆ ನಡೆಸಿ ವಾದ–ಪ್ರತಿ ವಾದ ಆಲಿಸಿದ್ದ ಹೈಕೋರ್ಟ್, ನ್ಯಾಯಯುತ ದರ ನಿಗದಿ ಮಾಡುವಂತೆ ಓಲಾ ಹಾಗೂ ಉಬರ್ ಕಂಪನಿಗಳಿಗೆ 15 ದಿನಗಳ ಕಾಲಾವಕಾಶ ನೀಡಿತ್ತು. ಅದಕ್ಕೂ ಮುನ್ನವೇ ಎಚ್ಚೆತ್ತ ಕಂಪನಿಗಳು, ಪ್ರಯಾಣ ದರ ಇಳಿಕೆ ಮಾಡಿವೆ.
‘1.80 ಕಿ.ಮೀ ದೂರಕ್ಕೆ ₹ 35 ದರ ನಿಗದಿ ಮಾಡ ಲಾಗಿದೆ. ನಂತರ, ಪ್ರತಿ ಕಿ.ಮೀ.ಗೆ 15 ನಿಗದಿಪಡಿಸಲಾಗಿದೆ. ಇಷ್ಟಾದರೂ ಓಲಾ ಹಾಗೂ ಉಬರ್ ಕಂಪನಿಗಳು ಹೆಚ್ಚಿನ ದರ ವಸೂಲಿ ಮಾಡುತ್ತಿದ್ದವು. ಹೈಕೋರ್ಟ್ ಸೂಚನೆ ನೀಡುತ್ತಿದ್ದಂತೆ ಕಂಪನಿಗಳು ದರ ಇಳಿಕೆ ಮಾಡಿವೆ’ ಎಂದು ಗ್ರಾಹಕ ಲೋಕೇಶ್ ತಿಳಿಸಿದರು.
‘ಈ ಹಿಂದೆ ಪ್ರತಿ ಕಿ.ಮೀ.ಗೆ ₹ 50ರಿಂದ ₹100ವಸೂಲಿ ಮಾಡಲಾಗುತ್ತಿತ್ತು. ಇದೀಗ ದರ ಇಳಿಕೆ ಮಾಡಿರುವುದ ರಿಂದ, ಸರ್ಕಾರ ನಿಗದಿಪಡಿಸಿರುವ ದರವೇ ಆ್ಯಪ್‌ಗಳಲ್ಲಿ ತೋರಿಸುತ್ತಿವೆ. ಕೆಲ ಗ್ರಾಹಕರಿಗೆ ರಿಯಾಯಿತಿ ಸಹ ನೀಡ ಲಾಗುತ್ತಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.