ಬೆಂಗಳೂರು: ರಾಜ್ಯದಲ್ಲಿ ಮೇ 28ರ ಸಂಜೆ 5ಗಂಟೆಯಿಂದ ಮೇ 29ರ ಮಧ್ಯಾಹ್ನ 12 ಗಂಟೆವರೆಗೆ 178 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇದರೊಂದಿಗೆ ರಾಜ್ಯದಲ್ಲಿ 2,711 ಮಂದಿಗೆ ಸೋಂಕು ತಗುಲಿದ್ದು, 47 ಮಂದಿ ಮೃತಪಟ್ಟಿದ್ದಾರೆ.
ಈವರೆಗೆ 869 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,793 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.
ಇಂದು ಬೆಂಗಳೂರಿನಲ್ಲಿ 10, ರಾಯಚೂರು 62, ಯಾದಗಿರಿ 60, ಉಡುಪಿ 15, ಕಲಬುರ್ಗಿ 15, ದಾವಣಗೆರೆ 4, ಚಿಕ್ಕಬಳ್ಳಾಪುರ 4, ಮೈಸೂರು 2, ಮಂಡ್ಯ 2, ಧಾರವಾಡ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.