ADVERTISEMENT

ಕಲಬುರ್ಗಿಯಲ್ಲಿ 300ಕ್ಕೂ ಹೆಚ್ಚು ಟ್ರ್ಯಾಕ್ಟರ್‌ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 19:51 IST
Last Updated 26 ಜನವರಿ 2021, 19:51 IST
ಕಿಸಾನ್ ಮೋರ್ಚಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ಕಲಬುರ್ಗಿ ನಗರದ ಹುಮನಾಬಾದ್ ರಿಂಗ್ ರೋಡ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರಗೆ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ನಡೆಯಿತು. –ಪ್ರಜಾವಾಣಿ ಚಿತ್ರ/ ಪ್ರಶಾಂತ್‌ ಎಚ್‌. ಜಿ
ಕಿಸಾನ್ ಮೋರ್ಚಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ಕಲಬುರ್ಗಿ ನಗರದ ಹುಮನಾಬಾದ್ ರಿಂಗ್ ರೋಡ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರಗೆ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ನಡೆಯಿತು. –ಪ್ರಜಾವಾಣಿ ಚಿತ್ರ/ ಪ್ರಶಾಂತ್‌ ಎಚ್‌. ಜಿ   

ಬೆಂಗಳೂರು: ನೂತನ ಕೃಷಿ ಕಾಯ್ದೆ ಗಳನ್ನು ವಿರೋಧಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಟ್ರ್ಯಾಕ್ಟರ್‌ ರ್‍ಯಾಲಿ ನಡೆದಿದ್ದು, ಮಂಗಳೂರಿನಲ್ಲಿ ಮಾತ್ರ ಸಾಂಕೇತಿಕ ಪ್ರತಿಭಟನೆ ನಡೆಯಿತು.

ಕಲಬುರ್ಗಿ, ಹುಬ್ಬಳ್ಳಿ, ಬಾಗಲ ಕೋಟೆ, ಬೀದರ್‌, ರಾಯಚೂರು, ಯಾದಗಿರಿ, ಭಾಲ್ಕಿ ಹಾಗೂ ಗಂಗಾವತಿ ನಗರಗಳಲ್ಲಿಯೂ ಟ್ರ್ಯಾಕ್ಟರ್‌ಗಳಲ್ಲಿ ರೈತರು ಮೆರವಣಿಗೆ ನಡೆಸಿದರು.‌

ಸಾಂಕೇತಿಕ ಪ್ರತಿಭಟನೆ: ರೈತರ ಹೋರಾಟವನ್ನು ಬೆಂಬಲಿಸಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ರೈತರು
ಟ್ರ್ಯಾಕ್ಟರ್‌ಗಳೊಂದಿಗೆ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿಭಟನೆ ನಡೆದಿಲ್ಲ.

ADVERTISEMENT

ಮಂಗಳೂರಿನಲ್ಲಿ ಟ್ರ್ಯಾಕ್ಟರ್‌ಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಹೊರಟಿದ್ದ ಪ್ರತಿಭಟನಕಾರರನ್ನು ಕ್ಲಾಕ್‌ಟವರ್ ಬಳಿ ತಡೆಯಲಾಯಿತು. ಅಲ್ಲಿ ಸಭೆ ನಡೆಸಿದ ಮುಖಂಡರು, ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದರು.

ಉಡುಪಿ ಜಿಲ್ಲೆಯ ಪರ್ಕಳ ಸೇರಿದಂತೆ ಕೆಲವೆಡೆ ಸಾಂಕೇತಿಕ ಪ್ರತಿಭಟನೆ ನಡೆದವು. ಚಿಕ್ಕಮಗಳೂರಿನ ರೈತ ಮುಖಂಡರು ಬೆಂಗಳೂರಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಜಿಲ್ಲೆಯಲ್ಲಿ ಯಾವುದೇ ಪ್ರತಿಭಟನೆ ನಡೆದಿಲ್ಲ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.