ADVERTISEMENT

ಕಾಸರಗೋಡಿನ ಕೃಷಿಕ ಸತ್ಯನಾರಾಯಣ ಬೇಲೇರಿ, ಮೈಸೂರಿನ ಸೋಮಣ್ಣಗೆ ಪದ್ಮಶ್ರೀ ಪ್ರಶಸ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜನವರಿ 2024, 16:47 IST
Last Updated 25 ಜನವರಿ 2024, 16:47 IST
   

ನವದೆಹಲಿ: ಕೇಂದ್ರ ಸರ್ಕಾರವು ಈ ಸಾಲಿನ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ.

ಕಾಸರಗೋಡಿನ ಭತ್ತದ ಕೃಷಿಕ ಸತ್ಯನಾರಾಯಣ ಬೇಲೇರಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. 650ಕ್ಕೂ ಹೆಚ್ಚು ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸುವ ಮೂಲಕ ಭತ್ತದ ತಳಿಗಳ ಸಂರಕ್ಷನಾಗಿ ಗುರುತಿಸಿಗೊಂಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಜೇನು ಕುರುಬರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸೋಮಣ್ಣ ಅವರಿಗೆ ಪದ್ಮಶ್ರೀ ಲಭಿಸಿದೆ.

ADVERTISEMENT

ಸಾಂಪ್ರದಾಯಿಕ ಪದ್ಧತಿಯನ್ನು ಮೀರಿ 14ನೇ ವಯಸ್ಸಿನಲ್ಲಿ ಕಾಡು ಆನೆಗಳನ್ನು ಪಳಗಿಸಲು ಪ್ರಾರಂಭಿಸಿದ ಭಾರತದ ಮೊದಲ ಮಹಿಳಾ ಮಾವುತಳಾದ ಅಸ್ಸಾಂನ ಪಾರ್ವತಿ ಬರುವಾ ಅವರಿಗೆ ಸಾಮಾಜಿಕ ಕಾರ್ಯ(ಪ್ರಾಣಿಗಳ) ವಿಭಾಗದಲ್ಲಿ ಪದ್ಮಶ್ರೀ ಲಭಿಸಿದೆ.

ಪ್ರತಿದಿನ ಸೈಕಲ್‌ನಲ್ಲಿ ಹೊಸ ಸ್ಥಳಗಳಿಗೆ ಪ್ರಯಾಣಿಸುವಾಗ ಬಂಜರು ಭೂಮಿಯಲ್ಲಿ 5,000ಕ್ಕೂ ಹೆಚ್ಚು ಆಲದ, ಮಾವು ಮತ್ತು ಬ್ಲ್ಯಾಕ್‌ಬೆರಿ ಮರಗಳನ್ನು ನೆಟ್ಟಿರುವ ಪುರುಲಿಯಾದ ಸಿಂಡ್ರಿ ಗ್ರಾಮದ ಬುಡಕಟ್ಟು ಪರಿಸರವಾದಿ ದುಖು ಮಾಝಿ ಅವರಿಗೆ ಸಮಾಜಕಾರ್ಯ (ಪರಿಸರ ಅರಣ್ಯೀಕರಣ) ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.