ಬೈಲಹೊಂಗಲ: ಲಿಂಗಾಯತ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಮಾಜದ ವತಿಯಿಂದ ‘ಪಂಚಅಶ್ವ’ ಎಂಬ ಕುದುರೆಯನ್ನು ಶುಕ್ರವಾರ ಕೊಡುಗೆ ನೀಡಲಾಯಿತು.
ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಯತ್ನಾಳ್ ಹಾಗೂ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಚನ್ನಮ್ಮನ ಪುತ್ಥಳಿಗೆ ಪುಷ್ಪ ಮಾಲೆ ಹಾಕಿ ಕೇಸರಿ ತಿಲಕ ಹಚ್ಚಿಕೊಂಡು ಬಿಳಿ ಬಣ್ಣದ ಕುದುರೆ ಏರಿದ ಯತ್ನಾಳ, ‘ಜೈ ಪಂಚಮಸಾಲಿ, ಜೈ ಚನ್ನಮ್ಮ’ ಎಂದು ಘೋಷಣೆ ಹಾಕಿದರು.
ಕುದುರೆ ದಾನಿಗಳಾದ ಮಲ್ಲಪ್ಪ ಅಂಗಡಿ, ಗೌಡಪ್ಪ ಪಾಟೀಲ, ಸಮಾಜ ಮುಖಂಡರಾದ ವೀಣಾ ಕಾಶಪ್ಪನವರ, ಶ್ರೀಶೈಲ ಬೋಳನ್ನವರ, ಮುರುಗೇಶ ಗುಂಡ್ಲೂರ, ಮಹೇಶ ಹರಕುಣಿ, ಮಹಾಂತೇಶ ಮತ್ತಿಕೊಪ್ಪ, ರಾಜಶೇಖರ ಮೂಗಿ, ಎಫ್.ಎಸ್.ಸಿದ್ಧನಗೌಡರ, ಉಮೇಶ ಬೋಳೆತ್ತಿನ, ಮಹೇಶ ಕೋಟಗಿ, ಶ್ರೀಶೈಲ ಶರಣಪ್ಪನವರ, ಗಂಗಪ್ಪ ಗುಗ್ಗರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.