ADVERTISEMENT

ಮತ ಹಾಕುವ ಫೋಟೊ ವೈರಲ್‌: ಗೋಪ್ಯ ಮತದಾನಕ್ಕೆ ಕಳಂಕ!

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 14:05 IST
Last Updated 5 ಡಿಸೆಂಬರ್ 2019, 14:05 IST
ಮತ ಹಾಕುವ ವೇಳೆ ತೆಗೆದುಕೊಂಡಿರುವ ಚಿತ್ರ
ಮತ ಹಾಕುವ ವೇಳೆ ತೆಗೆದುಕೊಂಡಿರುವ ಚಿತ್ರ   

ಹಾವೇರಿ: ಬಿಜೆಪಿ ಅಭ್ಯರ್ಥಿಗೇ ಮತ ಹಾಕಿದ್ದೇನೆ ಎಂಬುದನ್ನು ಖಾತ್ರಿ ಪಡಿಸಲು ಬಿಜೆಪಿ ಕಾರ್ಯಕರ್ತನೊಬ್ಬ ಮತ ಹಾಕುವ ವೇಳೆ ತೆಗೆದುಕೊಂಡಿರುವ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಮತದಾರ ಮಂಜಯ್ಯ ಚಾವಡಿ ಎಂಬುವವನೇ ಫೋಟೊ ತೆಗೆದುಕೊಂಡಿರುವ ವ್ಯಕ್ತಿ. ಮತಗಟ್ಟೆ ಕೇಂದ್ರಕ್ಕೆ ಮೊಬೈಲ್‌, ಕ್ಯಾಮೆರಾ ತೆಗೆದುಕೊಂಡು ಹೋಗಲು ನಿರ್ಬಂಧವಿದೆ. ಆದರೂ ಚುನಾವಣಾ ಸಿಬ್ಬಂದಿ ಕಣ್ತಪ್ಪಿಸಿ, ಮೊಬೈಲ್‌ ತೆಗೆದುಕೊಂಡು ಹೋಗಿದ್ದಾನೆ. ಕ್ರಮ ಸಂಖ್ಯೆ 1ರಲ್ಲಿರುವ ಅರುಣಕುಮಾರ ಗುತ್ತೂರ (ಪೂಜಾರ) ಎಂಬ ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತಿರುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.

‘ರಾವಣ ರಾಜ್ಯದಿಂದ ರಾಮ ರಾಜ್ಯದೆಡೆಗೆ ಬದಲಾವಣೆಯನ್ನು ತರುತ್ತಿರುವ ಸುಭದ್ರವಾದ ಪಕ್ಷಕ್ಕೆ ನನ್ನ ಮತ’ ಎಂಬ ಶೀರ್ಷಿಕೆಯೊಂದಿಗೆ ಮತ ಹಾಕುತ್ತಿರುವ ಚಿತ್ರವನ್ನು ತಾನೇ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾನೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.