ಬೆಳಗಾವಿ: ಪ್ರಧಾನಮಂತ್ರಿ ಸ್ವ–ನಿಧಿ ನಿಧಿಯಡಿ ಸಾಲ ಪಡೆಯುವ ಬೀದಿ ಬದಿ ವ್ಯಾಪಾರಿಗಳು ನೀಡಬೇಕಾಗಿದ್ದ ಮುದ್ರಾಂಕ ಶುಲ್ಕ ಪಾವತಿಯನ್ನು ರದ್ದುಪಡಿಸುವ ಕರ್ನಾಟಕ ಸ್ಟಾಂಪ್ ಅಧಿನಿಯಮ 1957ಕ್ಕೆ ತಿದ್ದುಪಡಿ ತರಲು ವಿಧಾನಸಭೆಗೆ ಒಪ್ಪಿಗೆ ನೀಡಿತು.
ಕಂದಾಯ ಸಚಿವ ಆರ್.ಅಶೋಕ ಮಸೂದೆಯನ್ನು ಮಂಡಿಸಿದರು. ಸಾಲದ ಕರಾರುಗಳ ಮೇಲೆ ₹500 ಸ್ಟಾಂಪ್ ಶುಲ್ಕವನ್ನು ಪಾವತಿಸಬೇಕಾಗಿತ್ತು. ಸಾರ್ವಜನಿಕ ಹಿತಾಸಕ್ತಿಯಿಂದ ಶುಲ್ಕ ಪಾವತಿ ಮಾಫಿ ಮಾಡಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.