ADVERTISEMENT

ಹಬ್ಬದ ಖರೀದಿಗೆ ಮುಗಿಬಿದ್ದ ಜನ: ಎಪಿಎಂಸಿಯನ್ನೇ ಮುಚ್ಚಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 4:25 IST
Last Updated 24 ಮಾರ್ಚ್ 2020, 4:25 IST
   

ರಾಮನಗರ: ಕರ್ನಾಟಕ ಲಾಕ್ ಡೌನ್ ಕರೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಂಗಳವಾರ ನಿಷೇಧಾಜ್ಞೆ ಜಾರಿಯಲ್ಲಿದೆ. ಆದಾಗ್ಯೂ‌ ಜನರು ಹಬ್ಬದ ಖರೀದಿಗೆ ಮುಗಿಬಿದ್ದಿದ್ದು, ಪೊಲೀಸರು ಬಲವಂತವಾಗಿ ಎಪಿಎಂಸಿಯನ್ನು ಬಂದ್ ಮಾಡಿಸಿದರು.

ಎಪಿಎಂಸಿ ಆವರಣದಲ್ಲಿ ಬೆಳಗ್ಗೆಯಿಂದಲೇ ಜನ ತರಕಾರಿ, ಹೂ ಹಣ್ಣು ಖರೀದಿಗೆ ಧಾವಿಸಿದರು. ಹೊತ್ತು ಕಳೆದಂತೆ ಜನಸಂದಣಿಯೂ ಹೆಚ್ಚಾಯಿತು. ಇಡೀ ಮಾರುಕಟ್ಟೆ ಪ್ರಾಂಗಣ ಜನರಿಂದ ತುಂಬಿತ್ತು. ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಮಧ್ಯ ಪ್ರವೇಶ ಮಾಡಿದ್ದು, ಲಾಠಿ ತೋರಿಸಿ ಜನರನ್ನು ಅಲ್ಲಿಂದ ಚದುರಿಸಿದರು. ನಂತರ ಮಾರುಕಟ್ಟೆ ಪ್ರವೇಶದ ಗೇಟುಗಳನ್ನು ಬಂದ್ ಮಾಡಲಾಯಿತು. ಒಳಗೆ ಇದ್ದವರಿಗೆ ಮಾತ್ರ ಖರೀದಿಗೆ ಅವಕಾಶ ನೀಡಲಾಯಿತು.

ಬೆಳಗ್ಗೆ ನಗರದಲ್ಲಿನ ಕೆಲವು ಅಂಗಡಿಗಳು ತೆರೆದಿದ್ದು, ಪೊಲೀಸರು ಅವುಗಳ ಬಾಗಿಲು ಮುಚ್ಚಿಸಿದರು. ಔಷಧ, ಹಾಲು ಮಾರಾಟದಂತಹ ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಬಸ್ ಸಂಚಾರವಿಲ್ಲ. ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಕಡಿಮೆ ಇದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.