ADVERTISEMENT

‘ವರ್ಗಾವಣೆ ಎಂಜಲು ದಂಧೆ ಗೊತ್ತಿಲ್ಲವೇ?’-ಗಿರೀಶ್ ಮಟ್ಟೆಣ್ಣವರ ಪ್ರಶ್ನೆ

ಗಿರೀಶ್ ಮಟ್ಟೆಣ್ಣವರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 19:34 IST
Last Updated 4 ಡಿಸೆಂಬರ್ 2021, 19:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಪೊಲೀಸರು ಹಾಳಾಗಿ ಹೋಗಿದ್ದು, ಎಂಜಲು ಕಾಸು ತಿನ್ನುತ್ತಾರೆ’ ಎಂದು ಹೇಳುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ, ವರ್ಗಾವಣೆಯ ಎಂಜಲು ದಂಧೆ ಗೊತ್ತಿಲ್ಲವೇ’ ಎಂದು ಮಾಜಿ ಪೊಲೀಸ್‌ ಅಧಿಕಾರಿ ಗಿರೀಶ ಮಟ್ಟೆಣ್ಣವರ ಪ್ರಶ್ನಿಸಿದ್ದಾರೆ.

‘ಉಪ್ಪಾರಪೇಟೆ, ಚಿಕ್ಕಪೇಟೆ, ಕಬ್ಬನ್ ಪಾರ್ಕ್, ದೇವನಹಳ್ಳಿ, ವೈಟ್ ಫೀಲ್ಡ್, ವರ್ತೂರು ಠಾಣೆಗೆ ವರ್ಗವಾಗಿ ಬರುವ ಅಧಿಕಾರಿಗಳು ₹ 50 ಲಕ್ಷ ಎಂಜಲು ನೀಡಬೇಕು. ಒಂದಿಷ್ಟು ಜಾಗ ಹೊರತುಪಡಿಸಿ, ಯಾವುದೇ ಠಾಣೆಗೆ ನೇಮಕಗೊಳ್ಳಲು ಕನಿಷ್ಠ ₹ 25 ಲಕ್ಷ ನೀಡಲೇಬೇಕು. ವರ್ಗಾವಣೆಯ ಪ್ರತಿ ಹಂತದಲ್ಲಿ ಎಂಜಲು ಕೊಡುವುದು ಸಾಮಾನ್ಯವಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT