ADVERTISEMENT

ಕ್ಷಿಪ್ರ ರಾಜಕೀಯ ಬೆಳವಣಿಗೆ: ರಾಜೀನಾಮೆ ನೀಡಲು ಸ್ಪೀಕರ್‌ ಕಚೇರಿಗೆ ಬಂದ 8 ಶಾಸಕರು?

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 8:56 IST
Last Updated 6 ಜುಲೈ 2019, 8:56 IST
   

ಬೆಂಗಳೂರು: ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 8 ಕ್ಕೂ ಹೆಚ್ಚುಮಂದಿ ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ.

ರಮೇಶ್‌ ಜಾರಕಿಹೊಳಿ, ಎಚ್‌.ವಿಶ್ವನಾಥ್‌, ಬಿ.ಸಿ ಪಾಟೀಲ್‌,ಶಿವರಾಮ್‌ ಹೆಬ್ಬಾರ್‌, ಗೋಪಾಲಯ್ಯ, ನಾರಾಯಣಗೌಡ, ಮಹೇಶ್‌ ಕುಮಠಳ್ಳಿಅವರು ಸ್ಪೀಕರ್‌ ಕಚೇರಿಗೆ ತೆರಳಿದ್ದು, ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT
ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ವಿಧಾನಸೌಧದ ಸ್ಪೀಕರ್‌ ಕಚೇರಿ ಬಳಿ ಜನಜಂಗುಳಿ

ಶಾಸಕರು ಸ್ಪೀಕರ್‌ ಕಚೇರಿಗೆ ತೆರಳಿದಾಗಲೇ ರಮೇಶ್‌ ಕುಮಾರ್‌ ಅವರು ಕಚೇರಿಯಿಂದ ಹೊರಗೆ ತೆರಳಿದ್ದಾರೆ. ಬಹುತೇಕ ಸ್ಪೀಕರ್‌ ಕಚೇರಿಗೆ ಬಂದ ಕೂಡಲೇ ಈ ಎಂಟೂ ಶಾಸಕರೂ ರಾಜೀನಾಮೆ ನೀಡುವ ಸಂಭವವಿದೆ ಎಂದು ಹೇಳಲಾಗುತ್ತಿದೆ.‌

ರಾಮಲಿಂಗಾ ರೆಡ್ಡಿ ಮತ್ತು ಅವರ ಪುತ್ರಿ ಸೌಮ್ಯಾ ರೆಡ್ಡಿ ಮತ್ತು ಶಾಸಕ ಭೀಮಾ ನಾಯ್ಕ ಕೂಡರಾಜೀನಾಮೆಗೆ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.