ADVERTISEMENT

ಅಂಚೆ ಅಪಘಾತ ವಿಮೆ: 4.50 ಲಕ್ಷ ಗ್ರಾಹಕರು

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 16:21 IST
Last Updated 14 ಜೂನ್ 2024, 16:21 IST
<div class="paragraphs"><p>ಅಂಚೆ ಇಲಾಖೆ</p></div>

ಅಂಚೆ ಇಲಾಖೆ

   

ಬೆಂಗಳೂರು: ಅಂಚೆ ಇಲಾಖೆಯ ‘ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌’ (ಐಪಿಪಿಬಿ) ಜಾರಿಗೆ ತಂದಿರುವ ಗುಂಪು ಅಪಘಾತ ರಕ್ಷಣಾ ವಿಮಾ ಯೋಜನೆ ರಾಜ್ಯದಲ್ಲಿ 4.50 ಲಕ್ಷ ಗ್ರಾಹಕರನ್ನು ಸೆಳೆದಿದೆ.

ಪ್ರತಿ ದಿನ ಸರಾಸರಿ ಐದು ಸಾವಿರ ಜನರು ವೈಯಕ್ತಿಕ ಅಪಘಾತ ಯೋಜನೆಯಡಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ವರ್ಷಕ್ಕೆ ₹520 ವಿಮಾ ಕಂತು ಪಾವತಿಸಿದರೆ ₹10 ಲಕ್ಷ ಹಾಗೂ ₹749 ಪಾವತಿಸಿದರೆ ₹15 ಲಕ್ಷ ವಿಮಾ ಮೊತ್ತದ ಸೌಲಭ್ಯ ದೊರಕಲಿದೆ. ಯೋಜನೆ ರಾಜ್ಯದ ಎಲ್ಲ ಅಂಚೆ ಕಚೇರಿಗಳಲ್ಲೂ ಲಭ್ಯವಿದ್ದು, ಪೋಸ್ಟ್‌ಮನ್‌ ಮೂಲಕ ಮನೆ ಬಾಗಿಲಿಗೂ ತಲುಪಿಸಲಾಗುತ್ತದೆ ಎಂದು ‘ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌’ ಎಸ್‌.ರಾಜೇಂದ್ರಕುಮಾರ್ ಹೇಳಿದ್ದಾರೆ.

ADVERTISEMENT

ವಿಮಾ ಸೌಲಭ್ಯ ಪಡೆಯಲು ಬಯಸುವವರು ಆಧಾರ್‌ ಜೋಡಣೆ ಮಾಡಿದ ಶಿಲ್ಕು ರಹಿತ ಡಿಬಿಟಿ ಖಾತೆ ತೆರೆಯಬಹುದು. ರಾಜ್ಯದಲ್ಲಿ ಐದು ವರ್ಷಗಳಲ್ಲಿ ಐಪಿಪಿಬಿ 50 ಲಕ್ಷ ಗ್ರಾಹಕರನ್ನು ಹೊಂದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.