ADVERTISEMENT

ಪ್ರಭಾಕರ್‌ ರಾವ್‌ ಸಕ್ಕರೆ ಕಾರ್ಖಾನೆ ಸಂಸ್ಥೆಗಳ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 18:26 IST
Last Updated 8 ಫೆಬ್ರುವರಿ 2024, 18:26 IST
ಮಾಂಡವ ಪ್ರಭಾಕರ್‌ ರಾವ್‌
ಮಾಂಡವ ಪ್ರಭಾಕರ್‌ ರಾವ್‌   

ಬೆಂಗಳೂರು: ಭಾರತೀಯ ಸಕ್ಕರೆ ಕಾರ್ಖಾನೆ ಹಾಗೂ ಜೈವಿಕ ಇಂಧನ ಉತ್ಪಾದಕರ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಎನ್‌ಎಸ್‌ಎಲ್‌ ಸಕ್ಕರೆ ಕಂಪನಿ ಮಾಲೀಕ ಮಾಂಡವ ಪ್ರಭಾಕರ್‌ ರಾವ್‌ ಆಯ್ಕೆಯಾಗಿದ್ದಾರೆ.

ಮಾಂಡವ ಪ್ರಭಾಕರ್‌ ರಾವ್‌ ಮೂಲತಃ ಆಂಧ್ರಪ್ರದೇಶದ ಗುಂಟೂರಿನ ರೈತ ಕುಟುಂಬದವರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿ. 1982ರಿಂದ ಎನ್‌ಎಸ್‌ಎಲ್‌ ಗ್ರೂಪ್‌ನ ಅಧ್ಯಕ್ಷರಾಗಿ ಬೀಜ ಉತ್ಪನ್ನ, ಟೆಕ್ಸ್‌ಟೈಲ್ಸ್‌, ಸಕ್ಕರೆ, ಮೂಲಸೌಕರ್ಯ ಮತ್ತು ನವೀಕರಿಸಬಹುದಾದ ಇಂಧನ ಉತ್ಪನ್ನ ವಿಭಾಗದಲ್ಲಿ ಹಲವಾರು ಕಂಪನಿಗಳನ್ನು ಸ್ಥಾಪಿಸಿದ್ದಾರೆ. 

ಎನ್‌ಎಸ್‌ಎಲ್‌ ಸಕ್ಕರೆ ಕಂಪನಿ ಕರ್ನಾಟಕದಲ್ಲಿ ನಾಲ್ಕು, ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ತಲಾ ಒಂದು ಕಾರ್ಖಾನೆ ನಡೆಸುತ್ತಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.