ವಾಡಿ (ಕಲಬುರಗಿ ಜಿಲ್ಲೆ): ‘ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮಠಗಳು ಹಾಗೂ ಮಠಾಧೀಶರು ಜಾತಿ, ಧರ್ಮಗಳ ಸೋಂಕಿನಿಂದ ಮುಕ್ತರಾಗಿ ಎಲ್ಲರನ್ನೂ ಅಪ್ಪಿಕೊಳ್ಳುವ ಶ್ರೇಷ್ಠ ಗುಣ ಹೊಂದಿರಬೇಕು’ ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ವಾಡಿ ಸಮೀಪದ ನಾಲವಾರ ಗ್ರಾಮದಲ್ಲಿ ಭಾನುವಾರ ಕೋರಿಸಿದ್ಧೇಶ್ವರ ಶಿವಯೋಗಿಗಳ ಜಾತ್ರೆಯ ಉದ್ಘಾಟನೆಯಲ್ಲಿ 2023ರ ’ಶ್ರೀಸಿದ್ಧ ತೋಟೇಂದ್ರ ಸಾಹಿತ್ಯ ರತ್ನ‘ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಮಠದ ಪರಂಪರೆ ಹೊಂದಿರುವ ಭಾರತದಲ್ಲಿ ಅಕ್ಷರದ ಅರಿವು ಮೂಡಿಸುವಲ್ಲಿ ಮಠಗಳು ಬಹುದೊಡ್ಡ ಪಾತ್ರ ವಹಿಸುತ್ತಿವೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.