ADVERTISEMENT

ಕೈದಿ ಮಗುವಿಗೆ ‘ಅಭಿನಂದನ್‌’ ಹೆಸರು

ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಮಗುವಿನ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 20:23 IST
Last Updated 16 ಮಾರ್ಚ್ 2019, 20:23 IST
ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಶನಿವಾರ ಮಹಿಳಾ ವಿಚಾರಣಾಧೀನ ಕೈದಿಯ ಮಗುವಿನ ನಾಮಕರಣ ಹಾಗೂ ಹುಟ್ಟುಹಬ್ಬವನ್ನು ಆಚರಿಸಲಾಯಿತು
ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಶನಿವಾರ ಮಹಿಳಾ ವಿಚಾರಣಾಧೀನ ಕೈದಿಯ ಮಗುವಿನ ನಾಮಕರಣ ಹಾಗೂ ಹುಟ್ಟುಹಬ್ಬವನ್ನು ಆಚರಿಸಲಾಯಿತು   

ಕೊಪ್ಪಳ: ಜಿಲ್ಲಾ ಕಾರಾಗೃಹದಲ್ಲಿ ಮಹಿಳಾ ವಿಚಾರಣಾಧೀನ ಕೈದಿಯ ಒಂದು ವರ್ಷದ ಗಂಡುಮಗುವಿಗೆ ಶನಿವಾರ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರ ಹೆಸರನ್ನು ಇಡಲಾಯಿತು.

ಸಂಪ್ರದಾಯದಂತೆ ತೊಟ್ಟಿಲು ಕಾರ್ಯಕ್ರಮ ನಡೆಯಿತು. ಇದಕ್ಕಾಗಿ ಕಾರಾಗೃಹವನ್ನು ಹೂ, ತಳಿರು–ತೋರಣಗಳಿಂದ ಅಲಂಕರಿಸಲಾಗಿತ್ತು. ಮಗುವಿನ ಸೋದರ ಮಾವ ಹಾಗೂ ಕೈದಿಯೂ ಆಗಿರುವ ಮಣಿಕಂಠ ‘ಅಭಿನಂದನ್‌’ ಎಂದು ಹೆಸರು ಹೇಳಿದರು. ಮಹಿಳಾ ಕೈದಿಗಳು ಆರತಿ ಬೆಳಗಿದರು. ಹಾಜರಿದ್ದವರು ಅಕ್ಷತೆ ಹಾಕಿ ಆಶೀರ್ವಾದಿಸಿದರು.

ಆಂಧ್ರಪ್ರದೇಶದ ಜ್ಯೋತಿ ಒಂದು ವರ್ಷದಿಂದ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ವಿಚಾರಣೆಗಾಗಿ ವಿಜಯಪುರಕ್ಕೆ ಕರೆದೊಯ್ದಿದ್ದಾಗ ಅಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.

ADVERTISEMENT

‘ಕೈದಿಗಳ ಮಕ್ಕಳಾದರೂ ಅವರು ತಮ್ಮ ಹಕ್ಕುಗಳಿಂದ ವಂಚಿತರಾಗಬಾರದು. ಸಾಮಾಜಿಕ ನ್ಯಾಯ ಹಾಗೂ ಮಕ್ಕಳ ರಕ್ಷಣೆ ಕಾಯ್ದೆಯಡಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಗುವಿಗೆ ನಾಮಕರಣ ಹಾಗೂ ಜನ್ಮದಿನವನ್ನು ಆಚರಿಸಲಾಯಿತು’ ಎಂದು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಅಧ್ಯಕ್ಷ ಸಂಜೀವ್‌ ಕುಲಕರ್ಣಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.