ADVERTISEMENT

ಗೌರಿ, ಗಣೇಶ ಹಬ್ಬ: ಖಾಸಗಿ ಬಸ್‌ಗಳ ದರ ದುಬಾರಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2023, 23:30 IST
Last Updated 13 ಸೆಪ್ಟೆಂಬರ್ 2023, 23:30 IST
ಖಾಸಗಿ ಬಸ್‌ಗಳ ದರ ದುಪ್ಪಟ್ಟು
ಖಾಸಗಿ ಬಸ್‌ಗಳ ದರ ದುಪ್ಪಟ್ಟು   

ಬೆಂಗಳೂರು: ಗೌರಿ, ಗಣೇಶ ಹಬ್ಬ, ವಾರಾಂತ್ಯದ ದಿನಗಳು ಒಟ್ಟೊಟ್ಟಿಗೆ ಬಂದಿರುವುದರಿಂದ ರಜಾವಧಿಯಲ್ಲಿ ಊರಿಗೆ, ಪ್ರವಾಸಕ್ಕೆ ಹೋಗುವವರಿಗೆ ಖಾಸಗಿ ಬಸ್‌ಗಳ ದರ ದುಬಾರಿ ಆಗಿದೆ.

ಕೆಲವು ಕಡೆಗಳಲ್ಲಿ ಸೋಮವಾರ, ಕೆಲವು ಕಡೆಗಳಲ್ಲಿ ಮಂಗಳವಾರ ಗಣೇಶೋತ್ಸವ ಆಚರಿಸಲಾಗುತ್ತಿದೆ. ಶನಿವಾರ, ಭಾನುವಾರ ಜೊತೆಗೆ ಇರುವುದರಿಂದ ಶುಕ್ರವಾರ ಊರಿಗೆ ಹೊರಡುವವರ ಸಂಖ್ಯೆ ಹೆಚ್ಚಾಗಿದೆ.

ಗುರುವಾರ, ಶುಕ್ರವಾರ ಮತ್ತು ಶನಿವಾರ ಈ ಮೂರು ದಿನಗಳಲ್ಲಿ ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಹೋಗುವವರಿಗೆ, ಮಂಗಳವಾರ ಬುಧವಾರ ಬೆಂಗಳೂರಿಗೆ ವಾಪಸ್‌ ಆಗುವವರಿಗೆ ಖಾಸಗಿ ಬಸ್‌ಗಳ ದರ ದುಪ್ಪಟ್ಟಾಗಿದೆ.

ADVERTISEMENT

ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವವರಿಗೆ ಖಾಸಗಿ ಬಸ್‌ಗಳಲ್ಲಿ ₹ 700ರಿಂದ ₹ 1,000 ವರೆಗೆ ಇದ್ದ ದರಗಳು ಈಗ ₹ 1,500ರಿಂದ ₹ 2,500 ವರೆಗೆ ಏರಿಕೆಯಾಗಿವೆ. ಮಂಗಳೂರಿಗೆ ₹ 700ರಿಂದ ₹ 950ರವರೆಗೆ ಇದ್ದಿದ್ದು ₹ 1400–₹ 2000ಕ್ಕೇರಿದೆ.

ಶಿರಸಿಗೆ ₹ 700–₹ 900 ಇದ್ದಿದ್ದು ₹ 1850–₹ 2,100ರವರೆಗೆ ಹೆಚ್ಚಳವಾಗಿದೆ. ಇದೇ ರೀತಿ ರಾಜ್ಯದ ವಿವಿಧ ನಗರಗಳಿಗೆ ತೆರಳುವವರಿಗೆ ಬಸ್‌ ದರ ಬರೆ ಎಳೆದಿದೆ.

ಕೆಎಸ್‌ಆರ್‌ಟಿಸಿ ಭರ್ತಿ: ಖಾಸಗಿ ಬಸ್‌ಗಳಲ್ಲಿ ದರ ಏರಿಕೆಯಾಗಿರುವುದರಿಂದ ಕೆಎಸ್ಆರ್‌ಟಿಸಿಯ ಬಸ್‌ಗಳಲ್ಲಿ ಸೀಟ್‌ಗಳು ಭರ್ತಿಯಾಗಿವೆ. ವಿಶೇಷ ಬಸ್‌ಗಳಲ್ಲಿಯೂ ಸೀಟ್‌ ಇಲ್ಲದಂತಾಗಿದೆ. ಸಾರಿಗೆ ಬಸ್‌ಗಳಲ್ಲಿ ಸೀಟುಗಳು ಲಭ್ಯವಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.