ಬೆಳಗಾವಿ: ನಗರದ ವಿವಿಧೆಡೆ ಅಂಟಿಸಲಾಗಿದ್ದ ತಮಿಳು ಚಲನಚಿತ್ರ ‘ಸರ್ಕಾರ್’ ಪೋಸ್ಟರ್‌ಗಳನ್ನು ಕನ್ನಡ ಪರ ಹೋರಾಟಗಾರ್ತಿ ಕಸ್ತೂರಿ ಬಾವಿ ಅವರು ಸೋಮವಾರ ಹರಿದು ತಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ತಮಿಳುನಾಡಿನಲ್ಲಿ ಕನ್ನಡ, ಕನ್ನಡಿಗರಿಗೆ ಗೌರವ ಕೊಡುವುದಿಲ್ಲ. ಹೀಗಿರುವಾಗ ರಾಜ್ಯೋತ್ಸವ ಆಚರಿಸುವ ನವೆಂಬರ್ ತಿಂಗಳಲ್ಲೇ ತಮಿಳು ಪೋಸ್ಟರ್‌ಗಳನ್ನು ಅಂಟಿಸಲು ಬಿಟ್ಟಿರುವುದು ಸರಿಯಲ್ಲ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪೋಸ್ಟರ್‌ಗಳನ್ನು ಗುಡ್ಡೆ ಹಾಕಿ ಬೆಂಕಿ ಹಚ್ಚಲು ಮುಂದಾದ ಅವರನ್ನು ತಡೆದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಬೆಂಕಿ ಹಚ್ಚಲು ಬಿಡಬೇಕು ಎಂದು ಪಟ್ಟು ಹಿಡಿದರು. ಅವರನ್ನು ಪೊಲೀಸರು ವಶಕ್ಕೆ ಪಡೆದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೆಂಕಿ ಹಚ್ಚಲು ತಂದಿದ್ದ ಪೋಸ್ಟರ್‌ಗಳನ್ನು ತೆರವುಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.