ಬೆಂಗಳೂರು: ಜೂನ್ 24ರಿಂದ ಜುಲೈ 5ರವರೆಗೆ ದ್ವಿತೀಯ ಪಿಯು ಮೂರನೇ ಪರೀಕ್ಷೆ ನಡೆಯಲಿದೆ. ಮೊದಲ ಹಾಗೂ ಎರಡನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು. ಎರಡೂ ಪರೀಕ್ಷೆಗಳಲ್ಲಿ ಕಡಿಮೆ ಫಲಿತಾಂಶ ಪಡೆದವರು ಫಲಿತಾಂಶ ಉತ್ತಮಪಡಿಸಿಕೊಳ್ಳಲು ಮೂರನೇ ಪರೀಕ್ಷೆ ಬರೆಯಬಹುದು. ಶುಲ್ಕ ಪಾವತಿಸಲು ಮೇ 28 ಕೊನೆಯ ದಿನ.
ದ್ವಿತೀಯ ಪಿಯು ಪರೀಕ್ಷೆ–3 ವೇಳಾಪಟ್ಟಿ
ಜೂನ್ 24–ಕನ್ನಡ, ಅರೇಬಿಕ್, 25–ಇಂಗ್ಲಿಷ್, 26–ಸಮಾಜ ಶಾಸ್ತ್ರ, ಜೀವ ವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಭೂಗರ್ಭ ಶಾಸ್ತ್ರ, 27–ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, 28–ಅರ್ಥಶಾಸ್ತ್ರ, ರಸಾಯನವಿಜ್ಞಾನ, 29–ಇತಿಹಾಸ, ಭೌತಶಾಸ್ತ್ರ, ಜುಲೈ 1–ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಗೃಹ ವಿಜ್ಞಾನ, 2–ಗಣಿತ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಶಿಕ್ಷಣಶಾಸ್ತ್ರ, 3–ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ, 4–ಹಿಂದಿ, 5–ತೆಲುಗು, ತಮಿಳು, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮಲೆಯಾಳಂ ಹಾಗೂ ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೊಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.