ADVERTISEMENT

ಪಿಯುಸಿ: ಮೌಲ್ಯಮಾಪಕರ ಭತ್ಯೆ ಶೇ 20ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 31 ಮೇ 2022, 19:30 IST
Last Updated 31 ಮೇ 2022, 19:30 IST

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಮತ್ತು ಉತ್ತರಪತ್ರಿಕೆ ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾದ ಸಿಬ್ಬಂದಿಗೆ ನೀಡಲಾಗುವ ಸಂಭಾವನೆ ಮತ್ತು ಭತ್ಯೆಯನ್ನು ಶೇ 20ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪರಿಷ್ಕರಿಸಿದ ಭತ್ಯೆ ಮೂರು ವರ್ಷಗಳವರೆಗೆ ಜಾರಿಯಲ್ಲಿ ಇರಲಿದೆ.‌

ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡುವ ಮುಖ್ಯ ಪರೀಕ್ಷಕರಿಗೆ ಇನ್ನು ಮುಂದೆ ದಿನವೊಂದಕ್ಕೆ ₹ 1,051 (ಈಗ ₹ 876), ಉಪ ಮುಖ್ಯ ಪರೀಕ್ಷಕರಿಗೆ ₹ 979 (ಈಗ ₹ 816) ಸಂಭಾವನೆ ಸಿಗಲಿದೆ. ಸಹಾಯಕ ಮೌಲ್ಯಮಾಪಕರ ಮೂರು ಗಂಟೆ ಅವಧಿಯ ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ ₹ 36 (ಈಗ ₹ 30), ಬೆಂಗಳೂರು ನಗರವೂ ಸೇರಿದಂತೆ ಶಿಬಿರಾಧಿಕಾರಿಗಳಿಗೆ, ಶಿಬಿರ ಮೇಲ್ವಿಚಾರಕರು ಮತ್ತು ಮೌಲ್ಯಮಾಪಕರಿಗೆ ನೀಡಲಾಗುವ ಭತ್ಯೆಯನ್ನು ₹ 979 (ಈಗ ₹ 816) ಆಗಿ ಪರಿಷ್ಕರಿಸಲಾಗಿದೆ.

ಸ್ಥಳೀಯ ಮೌಲ್ಯಮಾಪಕರಿಗೆ ದಿನ ವೊಂದಕ್ಕೆ ನೀಡಲಾಗುವ ಸ್ಥಳೀಯ ಸಾರಿಗೆ ಭತ್ಯೆಯನ್ನು ಬೆಂಗಳೂರು ನಗರದಲ್ಲಿ ₹ 288 (ಈಗ ₹ 240), ಇತರ ಸ್ಥಳಗಳಲ್ಲಿ ₹ 194 (ಪ್ರಸ್ತುತ ₹ 162) ಆಗಿ ಹೆಚ್ಚಳ ಮಾಡಲಾಗಿದೆ. ಅದೇ ರೀತಿ, ಮೌಲ್ಯಮಾಪನ ಕೇಂದ್ರಗಳ ಮೇಲ್ವಿಚಾರಕರು ಮತ್ತು ಇತರ ಸಿಬ್ಬಂದಿಯ ಸಂಭಾವನೆಯನ್ನೂ ಪರಿಷ್ಕರಿಸಲಾಗಿದೆ.

ADVERTISEMENT

ಮೌಲ್ಯಮಾಪನ ಕಾರ್ಯದ ವೇಳಾಪಟ್ಟಿ, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ, ಮೌಲ್ಯಮಾಪಕರ ಸಂಖ್ಯೆ ಪರಿಗಣಿಸಿ, ಸಂಭಾವನೆ ಮತ್ತು ಭತ್ಯೆ ನೀಡುವ ಗರಿಷ್ಠ ಮಿತಿಯನ್ನು ಮೌಲ್ಯ ಮಾಪನ ಮುಗಿಯುವರೆಗೆ ಅಥವಾ ಗರಿಷ್ಠ 20 ದಿನಗಳವರೆಗೆ ನೀಡುವಂತೆ ಆದೇಶದಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.