ADVERTISEMENT

ಬೆಂಗಳೂರು ವಿಮಾನ ನಿಲ್ದಾಣದಿಂದ ಗುಡಿಗೆರೆಯತ್ತ ಯೋಧ ಗುರು ಪಾರ್ಥಿವ ಶರೀರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 8:15 IST
Last Updated 16 ಫೆಬ್ರುವರಿ 2019, 8:15 IST
   

ಬೆಂಗಳೂರು:ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಗುಡಿಗೆರೆಯ ಯೋಧ ಎಚ್‌.ಗುರು ಅವರ ಪಾರ್ಥಿವಶರೀರವನ್ನು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತರಲಾಗಿದೆ. ಇಲ್ಲಿಂದ ಸೇನಾ ವಾಹನದಲ್ಲಿ ಹುಟ್ಟೂರಿನತ್ತ ತೆಗೆದುಕೊಂಡೊಯ್ಯಲಾಗುತ್ತಿದೆ.

ಸಿಎಂ ಗೌರವ ಸಲ್ಲಿಕೆ
ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾಸ್ವಾಮಿ ಅವರು ಪುಷ್ಪಗುಚ್ಚವಿರಿಸಿ ನಮನ ಸಲ್ಲಿಸಿದರು.

ಸ್ಥಳದಲ್ಲಿದ್ದ ದೇಶಾಭಿಮಾನಿಗಳು ದೇಶ ಹಾಗೂ ಯೋಧರ ಪರವಾಗಿ ಜಯಘೋಷ ಕೂಗಿದರು.

ADVERTISEMENT

ಸೇನಾ ವಾಹನದಲ್ಲಿ ವಾರ್ಥಿವ ಶರೀರ ಹೊತ್ತೊಯ್ಯುತ್ತಿರುವ ವಾಹನಕ್ಕೆ ಹೂಗಳಿಂದ ಅಲಂಕರಿಸಲಾಗಿದೆ. ರಸ್ತೆ ಬದಿಗಳಲ್ಲಿ ಜನರು ನಿಂತು ನಮನ ಸಲ್ಲಿಸುತ್ತಿದ್ದಾರೆ.

ಮಧ್ಯಾಹ್ನ 1.30ರ ವೇಳೆಗೆ ವಾಹನ ಇಲ್ಲಿಂದ ತೆರಳಿದ್ದು, ಮಧ್ಯಾಹ್ನ 3.30ರ ಸುಮಾರಿಗೆ ಗುಡಿಗೆರೆ ತಲುಪಬಹುದು ಎನ್ನಲಾಗಿದೆ.

* ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.