ಹೊಸಪೇಟೆ: ‘ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಅದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ ಆರೋಪಿಸಿದರು.
ಗುರುವಾರ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಆಯೋಜಿಸಿದ್ದ ವಿಜಯನಗರ ಕ್ಷೇತ್ರದ ಮಹಿಳಾ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು.
‘ಒಂದೆಡೆ ಕೊರೊನಾ ಸೋಂಕು ಹರಡುತ್ತಿರುವುದರಿಂದ ಜನ ಸಾವನ್ನಪ್ಪುತ್ತಿದ್ದಾರೆ. ಇನ್ನೊಂದೆಡೆ ಜನ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾರ್ಯಕರ್ತರು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುತ್ತ ಪಕ್ಷ ಸಂಘಟಿಸಬೇಕು’ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಇಮಾಮ್ ನಿಯಾಜಿ, ಮಹಿಳಾ ಕಾಂಗ್ರೆಸ್‌ನ ಭಾಗ್ಯಲಕ್ಷ್ಮಿ ಭರಾಡೆ, ಕೆರೋಲಿನ್ ಸ್ಮಿತ್, ಮುನ್ನಿ ಕಾಸಿಂ, ಬಾನುಬೀ, ರಜೀಯಾ ಬೇಗಂ, ರಂಗಮ್ಮ, ಶಮಾ, ಗೀತಾ ತಿಮ್ಮಪ್ಪ, ಗೌಸಿಯಾ ಬಾನು, ಆಶಾಬೀ, ಮುಖಂಡರಾದ ತೇಜ ನಾಯ್ಕ, ವಿನಯ ಶೆಟ್ಟರ್, ತಾಜುದ್ದೀನ್, ಅಲಾನ್ ಬಾಷಾ, ತಿಮ್ಮಪ್ಪ, ಕೋತಿ ಮಂಜುನಾಥ, ಫರೋಜ್, ಜಫ್ರುಲ್ಲಾ ಖಾನ್, ನಾಗರಾಜು, ರಾಜು, ಜಾವೀದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.