ಬೆಂಗಳೂರು: ಲೋಕೋಪಯೋಗಿ ಇಲಾಖೆಯ ನಿವೃತ್ತ ಸೂಪರಿಂಟೆಂಡಿಂಗ್ ಎಂಜಿನಿಯರ್ ಮಂಜುನಾಥ ಜಿ. ಬಳಿ ಅವರ ಅಧಿಕೃತ ಆದಾಯಕ್ಕೆ ಹೋಲಿಸಿದರೆ ಶೇಕಡ 635ರಷ್ಟು ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತಿಳಿಸಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಇಬ್ಬರು ನಿವೃತ್ತರೂ ಸೇರಿದಂತೆ 21 ಸರ್ಕಾರಿ ಅಧಿಕಾರಿಗಳ ಮೇಲೆ ಶುಕ್ರವಾರ ದಾಳಿಮಾಡಿದ್ದ ಎಸಿಬಿ, 80 ಸ್ಥಳಗಳಲ್ಲಿ ಶೋಧ ನಡೆಸಿತ್ತು. ಆರೋಪಿಗಳ ಬಳಿ ಪತ್ತೆಯಾಗಿರುವ ಆಸ್ತಿ ಮತ್ತು ಅಧಿಕೃತ ಆದಾಯದ ಮಾಹಿತಿಯನ್ನು ತನಿಖಾ ಸಂಸ್ಥೆ ತಾಳೆಹಾಕಿದೆ. ಆರೋಪಿತರು ಹೊಂದಿರುವ ಶೇಕಡಾವಾರು ಅಕ್ರಮ ಆಸ್ತಿಯ ವಿವರನ್ನು ಶನಿವಾರ ಪ್ರಕಟಿಸಿದೆ.
ಬಾಗಲಕೋಟೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ ಬಳಿ ಶೇ 343.60, ಬೀದರ್ ಪಶುವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ನಿಯಂತ್ರಕ ಮೃತ್ಯುಂಜಯ ಸಿ. ತಿರಾಣಿ ಬಳಿ ಶೇ 306.90 ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉದ್ಯಾನ ಸಿಬ್ಬಂದಿ ಶಿವಲಿಂಗಯ್ಯ ಬಳಿ ಶೇ 294ರಷ್ಟು ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಎಸಿಬಿ ತಿಳಿಸಿದೆ.
ಇತರ ಅಧಿಕಾರಿಗಳ ಅಕ್ರಮ ಆಸ್ತಿ ಪ್ರಮಾಣ:
* ಪರಮೇಶ್ವರಪ್ಪ, ಸಣ್ಣ ನೀರಾವರಿ ಇಲಾಖೆಯ ಹೂವಿನಹಡಗಲಿ ಉಪ ವಿಭಾಗದ ಸಹಾಯಕ ಎಂಜಿನಿಯರ್– ಶೇ 245.56
* ಮಧುಸೂದನ್, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಹಾಯಕ ಮಹಾನಿರೀಕ್ಷಕ – ಶೇ 230
* ಎಚ್.ಈ. ರಾಮಕೃಷ್ಣ, ಸಣ್ಣ ನೀರಾವರಿ ಇಲಾಖೆಯ ಹಾಸನ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ – ಶೇ 205
* ಶ್ರೀಧರ್ ಬಿ.ಎಸ್., ಉತ್ತರ ಕನ್ನಡ ಜಿಲ್ಲಾ ನೋಂದಣಾಧಿಕಾರಿ – ಶೇ 202.89
* ಶಂಕರಲಿಂಗ ನಾಗಪ್ಪ ಗೋಗಿ, ಬಾಗಲಕೋಟೆ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ –ಶೇ 202.04
* ತಿಪ್ಪಣ್ಣ ಪಿ. ಸಿರಸಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಬೀದರ್ ಜಿಲ್ಲಾ ಯೋಜನಾಧಿಕಾರಿ – ಶೇ 182.15
* ಪ್ರದೀಪ ಶಿವಪ್ಪ ಆಲೂರ, ಗದಗ ತಾಲ್ಲೂಕು ಅಸುಂಡಿ ಗ್ರಾಮ ಪಂಚಾಯಿತಿ ಗ್ರೇಡ್–2 ಕಾರ್ಯದರ್ಶಿ– ಶೇ 181.04
* ಡಿ. ಸಿದ್ದಪ್ಪ, ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಶಿವಮೊಗ್ಗದ ಉಪ ಮುಖ್ಯ ವಿದ್ಯುತ್ ಇನ್‌ಸ್ಪೆಕ್ಟರ್ –ಶೇ 162.50
* ಉದಯ ರವಿ, ಕೊಪ್ಪಳದ ಪೊಲೀಸ್ ಇನ್‌ಸ್ಪೆಕ್ಟರ್ –ಶೇ 150
* ಹರೀಶ್, ಸಣ್ಣ ನೀರಾವರಿ ಇಲಾಖೆಯ ಉಡುಪಿ ವಿಭಾಗದ ಸಹಾಯಕ ಎಂಜಿನಿಯರ್ – ಶೇ 142.39
* ಎ. ಮೋಹನ್ ಕುಮಾರ್, ಸಣ್ಣ ನೀರಾವರಿ ಇಲಾಖೆಯ ಚಿಕ್ಕಬಳ್ಳಾಪುರ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್– ಶೇ 129.65
* ಚಂದ್ರಪ್ಪ ಸಿ. ಓಲೇಕರ್, ತುಂಗಾ ಮೇಲ್ದಂಡೆ ಯೋಜನೆಯ ರಾಣೆಬೆನ್ನೂರು ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್– ಶೇ 125
* ಓಬಯ್ಯ, ಕೊಡಗು ಜಿಲ್ಲಾ ಪಂಚಾಯಿತಿಯ ವಿರಾಜಪೇಟೆ ಉಪ ವಿಭಾಗದ ಸಹಾಯಕ ಎಂಜಿನಿಯರ್– ಶೇ 125
* ಭೀಮರಾವ್ ಯಶವಂತ ಪವಾರ, ಲೋಕೋಪಯೋಗಿ ಇಲಾಖೆಯ ಬೆಳಗಾವಿ ವೃತ್ತದ ಸೂಪರಿಂಟೆಂಡಿಂಗ್ ಎಂಜಿನಿಯರ್ – ಶೇ 111.10
* ಬಿ.ಜಿ. ತಿಮ್ಮಯ್ಯ, ಅಜ್ಜಂಪುರ ಪಟ್ಟಣ ಪಂಚಾಯಿತಿಯ ದ್ವಿತೀಯ ದರ್ಜೆ ಸಹಾಯಕ–ಶೇ 90.90
* ಡಾ.ಕೆ. ಜನಾರ್ದನ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ನಿವೃತ್ತ ಕುಲಸಚಿವ – ಶೇ 76
* ರಾಜೀವ್ ಪಿ. ನಾಯಕ್, ಉತ್ತರ ಕನ್ನಡ ಜಿಲ್ಲೆಯ ಕಾರವಾರ ಉಪ ವಿಭಾಗದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ – ಶೇ 42.41
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.