ADVERTISEMENT

ರಾಣೆಬೆನ್ನೂರು: ಕೇಕ್‌ನಲ್ಲಿ ಅರಳಿದ ರಾಮ ಮಂದಿರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 6:15 IST
Last Updated 18 ಜನವರಿ 2024, 6:15 IST
   

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಣೆಬೆನ್ನೂರಿನ ಪ್ರವಾಸಿ ಮಂದಿರದ ಬಳಿ ಇರುವ ಬೇಕರಿ ಸರ್ಕಲ್ ಎಂಬ ಬೇಕರಿಯಲ್ಲಿ ಮಹಾಂತೇಶ್ ಎಂಬ ಯುವಕ 20 ಕೆ.ಜಿ ಶುಗರ್ ಪೇಸ್ಟ್‌ನಿಂದ ಅಯೋಧ್ಯೆಯ ರಾಮ ಮಂದಿರದ ಪ್ರತಿಕೃತಿ ನಿರ್ಮಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಅಯೋಧ್ಯೆಯ ರಾಮ ಮಂದಿರದ ಮಾದರಿಯನ್ನೇ ಹೋಲುವ ಈ ಕೇಕ್ ಕಲಾಕೃತಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕೇಕ್ ಪ್ರತಿಕೃತಿ ತಯಾರಕ ದಾವಣಗೆರೆ ತಾಲ್ಲೂಕಿನ ಹೊಸೂರು ಗ್ರಾಮದ ಯುವಕ ಮಹಾಂತೇಶ್ ಟಿ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಕಳೆದ 15 ವರ್ಷಗಳಿಂದ ವಿವಿಧ ಬಗೆಯ ಕೇಕ್ ತಯಾರಿಸುತ್ತೇನೆ. 20 ಕೆ.ಜಿ ಸಕ್ಕರೆ ಬಳಸಲಾಗಿದೆ. ₹40 ಸಾವಿರ ಖರ್ಚು ಮಾಡಿದ್ದು, ಸತತವಾಗಿ 5 ದಿನಗಳ ಕಾಲ ತಯಾರಿಸಲಾಗಿದೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.