ADVERTISEMENT

ದೇಶದಲ್ಲಿ ಆರಂಭವಾಗಲಿದೆ ‘ರಾಮರಾಜ್ಯ’: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2024, 15:59 IST
Last Updated 19 ಜನವರಿ 2024, 15:59 IST
ಬೆಂಗಳೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಯಶ್ರೀ ಅರವಿಂದ ಅವರು ಶ್ರೀರಾಮನ ಕುರಿತ ಹಾಡುಗಳಿಗೆ ಸಂಗಿತ ಸಂಯೋಜನೆ ಮಾಡಿರುವ ಧ್ವನಿ ಸುರುಳಿಯನ್ನು ಶಾಸಕ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. ಜಯಶ್ರೀ ಅರವಿಂದ, ರವಿ ಸುಬ್ರಮಣ್ಯ, ‌ಸತ್ಯಧ್ಯಾನ ಆಚಾರ್ಯ ಕಟ್ಟಿ ಉಪಸ್ಥಿತರಿದ್ದರು.

ಬೆಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಮೂಲಕ ರಾಮ ರಾಜ್ಯಕ್ಕೆ ಅಡಿಗಲ್ಲು ಹಾಕಲಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಸಂಗೀತ ನಿರ್ದೇಶಕಿ ಜಯಶ್ರೀ ಅರವಿಂದ ಅವರು ಶ್ರೀರಾಮನ ಕುರಿತ ಹಾಡುಗಳಿಗೆ ಸಂಗಿತ ಸಂಯೋಜನೆ ಮಾಡಿರುವ ಧ್ವನಿ ಸುರುಳಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರಾಮ ರಾಜ್ಯ ಎಂದರೆ ಎಲ್ಲರಿಗೂ ಸಮಾನ ಅವಕಾಶ, ಸಮೃದ್ಧಿ, ಬಡತನ ಎಲ್ಲಿಯೂ ಕಾಣದಂತಾಗುವುದು, ಅನ್ಯಾಯ ತಡೆಯುವುದು, ಎಲ್ಲರಿಗೂ ನ್ಯಾಯ ಸಿಗುವಂತೆ ಮಾಡುವುದೇ ಮೋದಿ ಅವರ ರಾಮರಾಜ್ಯದ ಕನಸು ಎಂದರು.

ADVERTISEMENT

500 ವರ್ಷಗಳಿಗೂ ಹೆಚ್ಚು ಕಾಲ ಅಯೋಧ್ಯೆಯ ಜನ್ಮ ಸ್ಥಳದಿಂದ ರಾಮನನ್ನು ದೂರ ಇಡಲಾಗಿತ್ತು. ರಾಮನ ಜನ್ಮಸ್ಥಳದಲ್ಲಿ ಬಾಬರಿ ಮಸೀದಿ ಇದ್ದ ಕಾರಣ ಅಲ್ಲಿ ಪೂಜೆ ಸಲ್ಲಿಸಲು ಆಗಿರಲಿಲ್ಲ. ಜ.22ಕ್ಕೆ ಮತ್ತೆ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತದೆ. ನರೇಂದ್ರ ಮೋದಿಯವರಿಂದಲೇ ತ್ರೇತಾಯುಗದ ರಾಮನ ಪ್ರತಿಷ್ಠಾಪನೆ ಆಗಬೇಕು ಎಂದು ಮೊದಲೇ ತೀರ್ಮಾನ ಆಗಿತ್ತು ಎನಿಸುತ್ತದೆ ಎಂದು ಹೇಳಿದರು.

ಶಾಸಕ ರವಿ ಸುಬ್ರಮಣ್ಯ, ಉತ್ತರಾದಿ ಮಠದ ಸಂಚಾಲಕ ಸತ್ಯಧ್ಯಾನ ಆಚಾರ್ಯ ಕಟ್ಟಿ, ಜಯಶ್ರೀ ಅರವಿಂದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.