ADVERTISEMENT

ಯುನೆಸ್ಕೊ ಅಂಗ ಸಂಸ್ಥೆ ಟಿಡಬ್ಲ್ಯೂಎಎಸ್‌ ಫೆಲೋಶಿಪ್‌ಗೆ ರಂಗಪ‍್ಪ ಆಯ್ಕೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 18:02 IST
Last Updated 2 ಡಿಸೆಂಬರ್ 2022, 18:02 IST
ಪ್ರೊ.ಕೆ.ಎಸ್‌.ರಂಗಪ್ಪ
ಪ್ರೊ.ಕೆ.ಎಸ್‌.ರಂಗಪ್ಪ   

ಮೈಸೂರು: ‘ಯುನೆಸ್ಕೊ ಅಂಗ ಸಂಸ್ಥೆಯಾದ ಇಟಲಿಯ ‘ದಿ ವರ್ಲ್ಡ್‌ ಅಕಾಡೆಮಿ ಆಫ್‌ ಸೈನ್ಸಸ್‌ (ಟಿಡಬ್ಲ್ಯೂಎಎಸ್‌) ಫೆಲೋಶಿಪ್‌ಗೆ ಈ ಸಾಲಿನಲ್ಲಿ ನನ್ನನ್ನು ಆಯ್ಕೆ ಮಾಡಲಾಗಿದೆ’ ಎಂದು ವಿಜ್ಞಾನಿ ಹಾಗೂ ನಿವೃತ್ತ ಕುಲಪತಿ ಪ್ರೊ.ಕೆ.ಎಸ್‌.ರಂಗ‍ಪ್ಪ ತಿಳಿಸಿದರು.

‘40 ವರ್ಷಗಳಿಂದ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಇದುವರೆಗಿನ ವೈಜ್ಞಾನಿಕ ಸಾಧನೆಗಳನ್ನು ಪರಿಗಣಿಸಿ ಅಕಾಡೆಮಿ ಆಯ್ಕೆ ಮಾಡಿದೆ. ರಾಜ್ಯದ ವಿಶ್ವವಿದ್ಯಾಲಯಗಳಿಂದ ಆಯ್ಕೆಯಾದ ಮೊದಲ ವ್ಯಕ್ತಿ ಎನಿಸಿದ್ದು ಹೆಮ್ಮೆಯ ಸಂಗತಿಯಾಗಿದೆ. 2022ನೇ ಸಾಲಿನಲ್ಲಿ ದೇಶದಿಂದ ಆಯ್ಕೆಯಾದ ಏಕೈಕ ವ್ಯಕ್ತಿ ನಾನು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಂಗಪ್ಪ 550ಕ್ಕೂ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಸಂಶೋಧನಾ ಲೇಖನ ಪ್ರಕಟಿಸಿದ್ದು, 11 ಪೇಟೆಂಟ್‌ಗಳನ್ನು ಪಡೆದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.