ADVERTISEMENT

ಅತ್ಯಾಚಾರ ಆರೋಪ ಪ್ರಕರಣ: ಜಿ.ದೇವರಾಜೇಗೌಡಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 16:09 IST
Last Updated 1 ಜುಲೈ 2024, 16:09 IST
ಜಿ.ದೇವರಾಜೇಗೌಡ
ಜಿ.ದೇವರಾಜೇಗೌಡ   

ಬೆಂಗಳೂರು: ಮಹಿಳೆಯೊಬ್ಬರ ವಿರುದ್ಧದ ಅತ್ಯಾಚಾರ ಆರೋಪದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಹೈಕೋರ್ಟ್ ವಕೀಲ ಜಿ.ದೇವರಾಜೇಗೌಡ ಅವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಸಂಬಂಧ ಹಾಸನದ ಜಿ.ದೇವರಾಜೇಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪುರಸ್ಕರಿಸಿ ಆದೇಶಿಸಿದೆ.

ದೇವರಾಜೇಗೌಡ ವಿರುದ್ಧ ಹೊಳೆನರಸೀಪುರ ಟೌನ್‌ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ–1860ರ ಕಲಂ 354(ಎ), 354(ಬಿ), 354(ಸಿ), 448, 504, 506 ಜೊತೆಗೆ ಕಲಂ 34ರ ಅಡಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(ಇ) ಅಡಿ ಪ್ರಕರಣ ದಾಖಲಿಸಲಾಗಿತ್ತು. ತದನಂತರ ಹೆಚ್ಚುವರಿಯಾಗಿ ಐಪಿಸಿ ಕಲಂಗಳಾದ 354(ಡಿ) ಮತ್ತು 376(1) ಅನ್ನು ಎಫ್‌ಐಆರ್‌ಗೆ ಸೇರ್ಪಡೆ ಮಾಡಲಾಗಿತ್ತು.

ADVERTISEMENT

ಹಾಸನ ಜಿಲ್ಲಾ ವಿಚಾರಣಾ ನ್ಯಾಯಾಲಯ ದೇವರಾಜೇಗೌಡ ಅವರಿಗೆ ಜೂನ್ 5ರಂದು ಜಾಮೀನು ನೀಡಲು ನಿರಾಕರಿಸಿತ್ತು. ಹೀಗಾಗಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.