ಬೆಂಗಳೂರು: ರಾಜ್ಯದಲ್ಲಿ ಒಟ್ಟು 1,50,90,534 ಪಡಿತರ ಚೀಟಿಗಳಿದ್ದು, ಈ ಪೈಕಿ 10,68,042 ಅಂತ್ಯೋದಯ ಕಾರ್ಡ್‌ಗಳು, 1,14,60,137 ಬಿಪಿಎಲ್ ಕಾರ್ಡ್‌ಗಳು, ಉಳಿದಂತೆ, 25,62,355 ಎಪಿಲ್ ಕಾರ್ಡ್‌ಗಳು ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
ಒಟ್ಟು ಬಿಪಿಎಲ್ ಕಾರ್ಡ್‌ಗಳ ಪೈಕಿ 13,87,652 ಕಾರ್ಡ್‌ಗಳನ್ನು ಅನರ್ಹ ಎಂದು ಗುರುತಿಸಲಾಗಿದೆ. ಅವುಗಳಲ್ಲಿ 98,473 ಆದಾಯ ತೆರಿಗೆ ಪಾವತಿದಾರರು ಹೊಂದಿರುವ ಕಾರ್ಡ್‌ಗಳಾಗಿವೆ. 4,036 ಸರ್ಕಾರಿ ನೌಕರರು ಹೊಂದಿರುವ ಕಾರ್ಡ್‌ಗಳಾಗಿವೆ. ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಹೆಚ್ಚಿರುವವರು ಹೊಂದಿರುವ ಕಾರ್ಡ್‌ಗಳ ಸಂಖ್ಯೆ 10,09,476. ಕಳೆದ ಆರು ತಿಂಗಳುಗಳಿಂದ ಪಡಿತರವನ್ನೇ ಪಡೆಯದ ಕಾರಣಕ್ಕೆ ಅಮಾನತುಗೊಂಡ ಕಾರ್ಡ್‌ಗಳ ಸಂಖ್ಯೆ 2,75,667.
ಅಲ್ಲದೆ, ಮೃತಪಟ್ಟ 1,59,319 ಸದಸ್ಯರ ಹೆಸರುಗಳನ್ನು ಕಾರ್ಡ್‌ನಿಂದ ತೆಗೆದುಹಾಕಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಅಮಾನತು, ರದ್ದು ಮತ್ತು ಎಪಿಲ್ ಕಾರ್ಡ್‌ಗಳಾಗಿ ಬದಲಾಯಿಸಿದ ಒಟ್ಟು ಕಾರ್ಡ್‌ಗಳ ಸಂಖ್ಯೆ 3,81,983.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಲಾಗಿದೆ ಎಂದು ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಇತರ ರಾಜ್ಯಗಳೊಂದಿಗೆ ಕರ್ನಾಟಕದಲ್ಲಿರುವ ಬಿಪಿಎಲ್ ಕಾರ್ಡ್‌ದಾರರನ್ನು ಹೋಲಿಸಿದರೆ, ರಾಜ್ಯದಲ್ಲಿ ಪಡಿತರಚೀಟಿ ಹೊಂದಿರುವ ಒಟ್ಟು ಕುಟುಂಬಗಳಿಗೆ ಶೇ 69.69ರಷ್ಟು ಬಿಪಿಎಲ್ ಕಾರ್ಡ್‌ಗಳಿವೆ.
ರಾಜ್ಯದ ತಲಾ ಆದಾಯ ಹೆಚ್ಚಾಗಿದ್ದರೂ ಬಿಪಿಎಲ್ ಕುಟುಂಬಗಳ ಸಂಖ್ಯೆಯು ಜಾಸ್ತಿಯಾಗಿದ್ದು, ಇದು ವ್ಯತಿರಿಕ್ತವಾಗಿ ಕಂಡುಬರುತ್ತಿದೆ. ಹೀಗಾಗಿ ಅನರ್ಹ ಕುಟುಂಬಗಳನ್ನು ಬಿಪಿಎಲ್ ವ್ಯಾಪ್ತಿಯಿಂದ ತೆಗೆಯುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು ಎಂದೂ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.