ADVERTISEMENT

ಗೃಹಲಕ್ಷ್ಮಿ‌ ಯೋಜನೆ: ಅರ್ಜಿ ಸ್ವೀಕಾರ ನಾಲ್ಕೈದು ದಿನ ಮುಂದಕ್ಕೆ– ಲಕ್ಷ್ಮೀ ಹೆಬ್ಬಾಳ್ಕರ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 10:43 IST
Last Updated 15 ಜೂನ್ 2023, 10:43 IST
Laxmi Hebbalkar
Laxmi Hebbalkar   

ಬೆಂಗಳೂರು: ಗೃಹಲಕ್ಷ್ಮಿ‌ ಯೋಜನೆಯ ಅರ್ಜಿ ಸ್ವೀಕಾರ ಮುಂದಕ್ಕೆ ಹೋಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಗೃಹಲಕ್ಷ್ಮೀ ಅರ್ಜಿ ಬಿಡುಗಡೆ ಕಾರ್ಯಕ್ರಮ ನಾಲ್ಕೈದು ದಿನ ಮುಂದಕ್ಕೆ ಹಾಕಲಾಗಿದೆ. ಬಹಳ ಒತ್ತಡ ಬೀಳಬಹುದು ಎಂದು ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಅವರು ಹೇಳಿದರು.

ಬಾಪೂಜಿ ಕೇಂದ್ರ, ನಾಡ ಕಚೇರಿಯಲ್ಲಿ ಕೂಡ ಅರ್ಜಿ ಸ್ವೀಕಾರಕ್ಕೆ ಅವಕಾಶವಿದೆ. ಒಂದು ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಲಾಗುತ್ತಿದೆ. ಒಂದು ಅರ್ಜಿ ತುಂಬಲು 4ರಿಂದ ಆರು ನಿಮಿಷ ಆಗಲಿದೆ. ಹೀಗಾಗಿ ಮಹಿಳೆಯರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ತಯಾರಿಗಾಗಿ ಮುಂದಕ್ಕೆ ಹಾಕಲಾಗಿದೆ ಎಂದು ಸ್ಪಷ್ಟಪಡಿಸಿದರು.

ADVERTISEMENT

ಇ–ಆಡಳಿತದವರು ಮೊಬೈಲ್ ಅಪ್ಲಿಕೇಶನ್‌ಗೆ ಎರಡು ದಿನ ಕೇಳಿದ್ದರು, ಬಳಿಕ, ನಾಲ್ಕು ದಿನ‌ ಕಾಲಾವಕಾಶ ಕೇಳಿದ್ದಾರೆ. ಈ ಕುರಿತಂತೆ, ಬಾಪೂಜಿ ಕೇಂದ್ರ, ನಾಡ ಕಚೇರಿ ಸಿಬ್ಬಂದಿಗೆ ತರಬೇತಿ ಕೊಡಬೇಕಾಗುತ್ತದೆ ಎಂದು ಹೆಬ್ಬಾಳ್ಕರ್ ತಿಳಿಸಿದರು.

ಇವುಗಳನ್ನೂ ಓದಿ..

ಅಕ್ಕಿ ಕೊಡುತ್ತೇವೆಂದು ಭರವಸೆ ನೀಡಿದ್ದ ಕೇಂದ್ರ ಉಲ್ಟಾ ಹೊಡೆದಿದೆ: ಕೆ.ಎಚ್. ಮುನಿಯಪ್ಪ

ಮತಾಂತರ ನಿಷೇಧ , ಎಪಿಎಂಸಿ ಕಾಯ್ದೆಗಳು ರದ್ದು: ಸಚಿವ ಸಂಪುಟ ಸಭೆ ನಿರ್ಧಾರ

ಸಾವರ್ಕರ್, ಹೆಡಗೇವಾರ್ ಪಠ್ಯಗಳಿಗೆ ಕೊಕ್‌: ನೆಹರೂ, ಅಂಬೇಡ್ಕರ್ ಪಠ್ಯ ಸೇರ್ಪಡೆ

ಶಾಲೆ, ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ: ಸಂ‍ಪುಟ ತೀರ್ಮಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.